ಬೆಂಗಳೂರು:ಸರ್ಕಾರದಫ್ಯಾಮಿಲಿ ಪ್ಲ್ಯಾನಿಂಗ್ಗೆ ಕೆಎಸ್ಆರ್ಟಿಸಿ ಹೊಸ ನಿಯಮವನ್ನು ಜಾರಿಗೆ ಮಾಡಿದ್ದು, ಎರಡು ಮಕ್ಕಳನ್ನು ಹೊಂದಿರುವ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಮುಂದಾಗಿದೆ.
ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದ್ದು, ಕೆಎಸ್ಆರ್ಟಿಸಿ ನೌಕರರಲ್ಲಿ ಯಾರು ಎರಡು ಮಕ್ಕಳನ್ನು ಹೊಂದಿರುತ್ತಾರೋ ಅಂತಹವರಿಗೆ ವಿಶೇಷ ವೇತನ ನೀಡಲು ಮುಂದಾಗಿದೆ. ಈ ಸೌಲಭ್ಯವನ್ನು ಪಡೆಯಲು ನೌಕರರು ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿರುತ್ತದೆ.
ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ ಹೊರಡಿಸಿರುವ ಸುತ್ತೋಲೆ ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, ವಾರ್ಷಿಕ ವೇತನ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣ ಸೇವಾವಧಿಗೆ ಪಡೆಯಲು ಅರ್ಹರಿರುತ್ತಾರೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಆದೇಶಿಸಲಾಗಿದೆ.
ಒಂದು ವೇಳೆ ಅರ್ಜಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಧೃಡೀಕರಣ ಪತ್ರ ಇಲ್ಲವಾದಲ್ಲಿ ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗುವುದಿಲ್ಲದೆಂದು ಆದೇಶಿಸಲಾಗಿದೆ. ಈ ಸಂಬಂಧ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ ಸುತ್ತೋಲೆ ಹೊರಡಿಸಿದ್ದಾರೆ.