ಕರ್ನಾಟಕ

karnataka

ETV Bharat / state

ತಗ್ಗಿದ ಕೆಎಸ್ಆರ್​ಟಿಸಿ, ಬಿಎಂಟಿಸಿ ಸಂಚಾರ ನಿಯಮ ಉಲ್ಲಂಘನೆ: ಅಪಘಾತ ಪ್ರಮಾಣ ಕೊಂಚ ಏರಿಕೆ - ಸಂಚಾರ ಪೊಲೀಸ್ ಇಲಾಖೆ

ಕೆಎಸ್ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ.

Etv Bharatksrtc-and-bmtc-traffic-violations-reduced-this-year
ಈ ವರ್ಷ ತಗ್ಗಿದ ಕೆಎಸ್ಆರ್​ಟಿಸಿ, ಬಿಎಂಟಿಸಿ ಸಂಚಾರ ನಿಯಮ ಉಲ್ಲಂಘನೆ: ಅಪಘಾತ ಪ್ರಮಾಣ ಕೊಂಚ ಏರಿಕೆ

By ETV Bharat Karnataka Team

Published : Dec 6, 2023, 10:57 PM IST

ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಪ್ರತಿಕ್ರಿಯೆ

ಬೆಂಗಳೂರು: ಅಪಘಾತದ ಕುರಿತು ನಗರ ಸಂಚಾರ ಪೊಲೀಸ್ ಇಲಾಖೆಯ ನಿರಂತರ ಜಾಗೃತಿ ಮೂಡಿಸಿದ ಫಲವಾಗಿ ಕೆಎಸ್ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಅಲ್ಲದೆ, ಅಪಘಾತ ಪ್ರಕರಣದಲ್ಲಿ ಕೊಂಚ ಏರಿಕೆಯಾಗಿದೆ. 2023ರಲ್ಲಿ 13,917 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿ 1,04 ಕೋಟಿ ದಂಡ ವಸೂಲಿಯಾಗಿದೆ.

2022ರಲ್ಲಿ 32066 ಪ್ರಕರಣಗಳಿಂದ 2.39 ಕೋಟಿ ದಂಡ ಸಂಗ್ರಹಿಸಲಾಗಿತ್ತು. ಅದೇ ರೀತಿ 2021ರಲ್ಲಿ 18,946 ಕೇಸ್ ದಾಖಲಾದರೆ 1.46 ಕೋಟಿ ದಂಡ ವಸೂಲಿ ಮಾಡಲಾಗಿತ್ತು. ಅದೇ ರೀತಿ ಸಾವಿರಾರು ಉಲ್ಲಂಘನಾ ಪ್ರಕರಣಗಳಿಂದ ಕೋಟ್ಯಂತರ ರೂಪಾಯಿ ದಂಡದ ಹಣ ಬಾಕಿ ಉಳಿದಿದೆ. ಈ ವರ್ಷ 3347 ಪ್ರಕರಣಗಳಿಂದ 1.43 ಕೋಟಿ ರೂಪಾಯಿ ದಂಡ ಬಾಕಿಯಿದೆ. 2022ರಲ್ಲಿ 17,664 ಪ್ರಕರಣಗಳಿಂದ 6.83 ಕೋಟಿ ದಂಡ ಹಾಗೂ 2021ರಲ್ಲಿ 10,689 ಕೇಸ್ ಗಳಿಂದ 57 ಲಕ್ಷ ದಂಡ ವಸೂಲಿ ಬಾಕಿಯಿದೆ ಎಂದು ಸಂಚಾರ ಪೊಲೀಸ್ ಇಲಾಖೆಯ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

ಕೆಎಸ್ಆರ್​ಟಿಸಿಗಿಂತ ಬಿಎಂಟಿಸಿಯೇ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸಿದೆ. ಶಿಸ್ತುಪಥ, ಸಿಗ್ನಲ್ ಜಂಪ್ ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿ ನಿಲುಗಡೆ ಮಾಡುವ ಮೂಲಕ ಟಾಫಿಕ್ ವೈಯಲೇಷನ್ ಮಾಡಿದೆ. ದಂಡ ಪಾವತಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ದಂಡ ಪಾವತಿಸಿದೆ. ಈ ವರ್ಷ ಬಿಎಂಟಿಸಿಯು 13,917 ಹಾಗೂ ಕೆಎಸ್ಆರ್​ಟಿಸಿ ಬಸ್​ಗಳು 3347 ಸಂಚಾರ ನಿಯಮ ಉಲ್ಲಂಘಿಸಿವೆ.

1.04 ಕೋಟಿ ಹಾಗೂ 14 ಲಕ್ಷ ದಂಡವನ್ನ ಕ್ರಮವಾಗಿ ಬಿಎಂಟಿಸಿ ಹಾಗೂ ಕೆಎಸ್ಆರ್​ಟಿಸಿ ದಂಡ ಪಾವತಿಸಿದೆ. ಅಪಘಾತ ಪ್ರಕರಣದಲ್ಲಿಯೂ ಕೊಂಚ ಏರಿಕೆನಗರದಲ್ಲಿ ಕೆಎಸ್ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಿಂದ ಅಪಘಾತ ಪ್ರಮಾಣ ಈ ವರ್ಷದಲ್ಲಿ ಕೊಂಚ ಏರಿಕೆಯಾಗಿದೆ. 2023ರಲ್ಲಿ ಬಿಎಂಟಿಸಿಯು 34 ಮಾರಣಾಂತಿಕ ಹಾಗೂ 97 ಪ್ರಕರಣಗಳು ಮಾರಣಾಂತಿಕವಲ್ಲದ ಅಪಘಾತ ಪ್ರಕರಣ ದಾಖಲಾಗಿವೆ. 2022ರಲ್ಲಿ 37 ಹಾಗೂ 85 ಮಾರಣಾಂತಿಕ ಹಾಗೂ ಮಾರಣಾಂತಿಕವಲ್ಲದ ಅಪಘಾತ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಕೆಎಸ್ಆರ್​ಟಿಸಿಯು ಈ ವರ್ಷ ಮಾರಣಾಂತಿಕ ಹಾಗೂ ಮಾರಣಾಂತಿಕ ವಲ್ಲದ ಅಪಘಾತ ಪ್ರಕರಣಗಳು ಕ್ರಮವಾಗಿ 10 ಹಾಗೂ 28ರಷ್ಟಾಗಿತ್ತು. 2022ರಲ್ಲಿ ಈ ಸಂಖ್ಯೆ 13 ಹಾಗೂ 28ಕ್ಕೆ ಸೀಮಿತವಾಗಿತ್ತು.

ಅಪಘಾತಕ್ಕೆ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಕಾರಣವಾಗಿರುವುದು ತಿಳಿದುಬಂದಿದೆ. ಸಂಚಾರ ನಿಯಮಗಳನ್ನ ಉಲ್ಲಂಘಿದಂತೆ ಹಾಗೂ ಒಂದು ವೇಳೆ ನಿಲ್ಲಂಘಿಸಿದರೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ ಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಬಿಎಂಟಿಸಿ ಬಸ್​ಗಳು ಅತಿ ಹೆಚ್ಚಿನದಾಗಿ ಸಿಗ್ನಲ್ ಜಂಪ್ ಮಾಡಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಬಿಎಂಟಿಸಿ ಅಪಘಾತಗಳ ವರದಿ:
ಮಾರಣಾಂತಿಕ ಮಾರಣಾಂತಿಕವಲ್ಲದ ಅಪಘಾತ ಪ್ರಕರಣ
2020-22 49
2021-27 58
2022-37 85
2023-34 97

ಇದನ್ನೂ ಓದಿ:ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣ; ಸಿಐಡಿ ತನಿಖೆ ಆರಂಭ

ABOUT THE AUTHOR

...view details