ಬೆಂಗಳೂರು: ರಾಜ್ಯದ ಹಲವೆಡೆ ಸೀಲ್ಡೌನ್ ಮತ್ತು ಕಂಟೋನ್ಮೆಂಟ್ ಏರಿಯಾದಲ್ಲಿ ನಿರಂತರವಾಗಿ ಓಡಾಡಿದ ಕೆಎಸ್ಆರ್ಪಿ ಸಿಬ್ಬಂದಿಯಲ್ಲಿ ಅತೀ ಹೆಚ್ಚು ಕೊರೊನಾ ಕಂಡುಬರ್ತಿರುವ ಕಾರಣ ಇವರ ಜವಾಬ್ದಾರಿಯನ್ನ ಹೊತ್ತಿರುವ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಕೋವಿಡ್ ಟೆಸ್ಟ್ಗೆ ಒಳಗಾಗಿದ್ದಾರೆ.
ಕೋವಿಡ್ ಟೆಸ್ಟ್ಗೆ ಒಳಗಾದ ಎಡಿಜಿಪಿ ಅಲೋಕ್ ಕುಮಾರ್, ವರದಿ ನೆಗೆಟಿವ್ - ಎಡಿಜಿಪಿ ಅಲೋಕ್ ಕುಮಾರ್ ವರದಿ ನೆಗೆಟಿವ್ ನ್ಯೂಸ್
ಸೋಂಕು ಕಾಣಿಸಿಕೊಂಡ ಕೆಎಸ್ಆರ್ಪಿ ಕಮಾಂಡ್ ಸೆಂಟರ್ ಡಿಸಿಪಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಕೂಡ ಕೊರೊನಾ ಟೆಸ್ಟ್ ಮಾಡಿಸಿದ್ದು, ಅವರ ವರದಿ ನೆಗೆಟಿವ್ ಬಂದಿದೆ.
ಸದ್ಯ ಇಂದು ಗಂಟಲ ಪರೀಕ್ಷಾ ವರದಿ ಬಂದಿದ್ದು ಅಲೋಕ್ ಕುಮಾರ್ ಅವರ ವರದಿ ನೆಗೆಟಿವ್ ಬಂದಿದೆ. ಕೆಎಸ್ಆರ್ಪಿಯ 51 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಅಲೋಕ್ ಕುಮಾರ್ ಅವರು ಹೋಂ ಕ್ವಾರಂಟೈನ್ನಲ್ಲಿರುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಧೈರ್ಯ ತುಂಬುವ ಕೆಲಸ ಮಾಡಿದ್ರು. ಹಾಗೆ ಇದೇ ಕೆಎಸ್ಆರ್ಪಿ ಕಮಾಂಡ್ ಸೆಂಟರ್ ಡಿಸಿಪಿ ಓರ್ವರಿಗೆ ಕೊರೊನಾ ಪಾಸಿಟಿವ್ ಇದ್ದು ಅವರ ಜೊತೆ ಪ್ರಾಥಮಿಕ ಸಂಪರ್ಕವನ್ನು ಅಲೋಕ್ ಕುಮಾರ್ ಅವರು ಹೊಂದಿದ್ದರು.
ಈ ಹಿನ್ನೆಲೆ ತಕ್ಷಣ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸದ್ಯ ಅಲೋಕ್ ಕುಮಾರ್ ಅವರ ವರದಿ ನೆಗೆಟಿವ್ ಬಂದಿದೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮುಖಾಂತರ ತಿಳಿಸಿದ್ದಾರೆ.
TAGGED:
ಪೊಲೀಸರಿಗೆ ಕೊರೊನಾ ಸುದ್ದಿ