ಬೆಂಗಳೂರು:ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೆಎಸ್ಐಐಡಿಸಿ ನಿಗಮದ ವತಿಯಿಂದ 2 ಕೋಟಿ ರೂ. ಚೆಕ್ ಸಮರ್ಪಣೆ ಮಾಡಲಾಯಿತು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೆಎಸ್ಐಐಡಿಸಿಯಿಂದ 2 ಕೋಟಿ ರೂ.ದೇಣಿಗೆ - ಕೆಎಸ್ಐಐಡಿಸಿ ಸಹಾಯಧನ
ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೆಎಸ್ಐಐಡಿಸಿ ನಿಗಮದ ವತಿಯಿಂದ 2 ಕೋಟಿ ದೇಣಿಗೆ ನೀಡಲಾಗಿದೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೃಹ ಕಚೇರಿಯಲ್ಲಿ ಚೆಕ್ ಹಸ್ತಾಂತರ ಕಾರ್ಯ ನೆರವೇರಿತು. ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ವ್ಯವಸ್ಥಾಪಕ ನಿರ್ದೇಶಕ ಡಾ: ವಿ. ರಾಮ್ ಪ್ರಸಾಥ್ ಮನೋಹರ್, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್, ನಿರ್ದೇಶಕರಾದ ಮಹದೇವಸ್ವಾಮಿ, ಭಾರತಿ ಹಾಗೂ ಗಾಯತ್ರಿ ಉಪಸ್ಥಿತರಿದ್ದರು.
ಇಡೀ ಜಗತ್ತು ಕೋವಿಡ್-19 ಮಹಾಮಾರಿಯಿಂದ ಬಳಲುತ್ತಿದ್ದು, ಕರ್ನಾಟಕ ಸಹ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಪ್ರಕರಣ ಹೊಂದಿದ ರಾಜ್ಯವಾಗಿದೆ. ವಿವಿಧ ಸಂಘ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದ ವಿವಿಧ ಅಂಗ ಸಂಸ್ಥೆಗಳು ಆರ್ಥಿಕ ಸಹಕಾರದ ರೂಪದಲ್ಲಿ ದೇಣಿಗೆ ನೀಡುತ್ತಾ ಬಂದಿದ್ದಾರೆ. ಇದರ ಭಾಗವಾಗಿಯೇ ಇಂದು ಕೆಎಸ್ಐಐಡಿಸಿ ತನ್ನ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿ ಸಿಎಂ ಕೇರ್ಸ್ಗೆ ಕೊಡುಗೆ ನೀಡಿದೆ.