ಕರ್ನಾಟಕ

karnataka

ETV Bharat / state

SSLC Result-2022: ಶೇ. 90.29 ವಿದ್ಯಾರ್ಥಿನಿಯರು ಪಾಸ್​, 145 ಮಕ್ಕಳಿಗೆ 625ಕ್ಕೆ 625 ಅಂಕ - ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

2022ನೇ ಸಾಲಿನ ಎಸ್​ಎಸ್​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ವರ್ಷ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆದಿತ್ತು.

KSEEB Karnataka SSLC Result 2022 announced
ಎಸ್​ಎಸ್​ಎಲ್​​ಸಿ ಫಲಿತಾಂಶ ಪ್ರಕಟ

By

Published : May 19, 2022, 12:51 PM IST

Updated : May 19, 2022, 1:41 PM IST

ಬೆಂಗಳೂರು:ಬಹು ನಿರೀಕ್ಷಿತ 2022ನೇ ಸಾಲಿನ ಎಸ್​ಎಸ್​ಎಲ್​​ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. 8,53,436 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ. 85.53% ಫಲಿತಾಂಶ ಬಂದಿದೆ. 81.03ರಷ್ಟು ಬಾಲಕರು ಹಾಗೂ ಶೇ. 90.29ರಷ್ಟು ಪಾಸ್​ ಆಗಿರುವ ವಿದ್ಯಾರ್ಥಿನಿಯರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್​ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು. 8,53,436 ಬರೆದಿದ್ದು, 730,881 ಮಕ್ಕಳು ಪಾಸ್​ ಆಗಿದ್ದು, ಶೇ. 85.63 ತೇರ್ಗಡೆ ಹೊಂದಿದಂತಾಗಿದೆ. ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಸ್​ ಆಗಿದ್ದಾರೆ. 145 ಮಕ್ಕಳು 625ಕ್ಕೆ 625 ಅಂಕ ಪಡೆದಿದ್ದಾರೆ. 309 ಮಕ್ಕಳು 624 ಅಂಕ ಪಡೆದು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.

ಈ ವರ್ಷ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆದಿತ್ತು. ಈ ಸಲ 15,387 ಶಾಲೆಗಳಿಂದ 8,73,859 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು ಎಂದು ಸಚಿವರು ತಿಳಿಸಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷ ಸಚಿವ ನಾಗೇಶ್ ಮಾಧ್ಯಮಗೋಷ್ಟಿ

ಅಂದಹಾಗೆ 2019-20ನೇ ಸಾಲಿನಿಂದಲೇ ರ‍್ಯಾಂಕ್ ಬದಲಿಗೆ ಗ್ರೇಡ್ ನೀಡುವ ಪದ್ಧತಿ ಜಾರಿಯಲ್ಲಿದೆ.‌ ಹೀಗಾಗಿ ಈ ವರ್ಷವೂ ಗ್ರೇಡ್ ನೀಡಲಾಗಿದೆ. ಈ ಸಲ ಮೌಲ್ಯಮಾಪನ ವಿದ್ಯಾರ್ಥಿ ಸ್ನೇಹಿಯಾಗಿ ಮಾಡಿದ್ದೇವೆ. ಹೀಗಾಗಿ ಹೆಚ್ಚು ಫಲಿತಾಂಶ ಬಂದಿದೆ. ಪ್ರಶ್ನೆ ಪತ್ರಿಕೆ ಕೂಡಾ ವಿದ್ಯಾರ್ಥಿ ಸ್ನೇಹಿಯಾಗಿತ್ತು. ಶೇ.10 ಮಾತ್ರ ಕಠಿಣ ಪ್ರಶ್ನೆಗಳನ್ನು ಪತ್ರಿಕೆಯಲ್ಲಿ ನೀಡಲಾಗಿದ್ದು, ಶೇ. 10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 175 ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ. 35,931 ವಿದ್ಯಾರ್ಥಿಗಳಿಗೆ ಒಂದು ವಿಷಯದಲ್ಲಿ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ. 3,940 ವಿದ್ಯಾರ್ಥಿಗಳಿಗೆ ಎರಡು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.

ಪೂರಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಜೂನ್ 27ರಿಂದ ಜುಲೈ 4ರವರೆಗೆ ನಡೆಯಲಿದೆ ಎಂದು ನಾಗೇಶ್​ ಮಾಹಿತಿ ನೀಡಿದರು.

ಲಿಂಗವಾರು ಫಲಿತಾಂಶ:

  • ಹಾಜರು - ಉತ್ತೀರ್ಣ - ಶೇಕಡವಾರು
  • ಬಾಲಕಿಯರು - 4,12,334 - 3,72,278 - 90.29%
  • ಬಾಲಕರು - 4,41,099 - 3,58,602- 81.30%

ಶಾಲಾವಾರು ಫಲಿತಾಂಶ

  • ಸರ್ಕಾರಿ - 88.00%
  • ಅನುದಾನಿತ - 87.84%
  • ಅನುದಾನ ರಹಿತ - 92.29%

ನಗರ ಮತ್ತು‌ ಗ್ರಾಮೀಣವಾರು ಫಲಿತಾಂಶ

  • ನಗರ - 2,92,946 - 86.64%
  • ಗ್ರಾಮೀಣ - 4,28,385 - 91.32%

ವಿದ್ಯಾರ್ಥಿಗಳ ಅಂಕದ ಮಾಹಿತಿ:

ಈ ಸಲ 145 ಮಕ್ಕಳು 625 ಅಂಕಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಹಾಗೆಯೇ 309 ಮಂದಿ 625ಕ್ಕೆ 624 ಅಂಕ ಗಳಿಸಿದ್ದಾರೆ. 472 ಮಕ್ಕಳು 623 ಅಂಕ ಹಾಗೂ 615 ಮಕ್ಕಳು 622 ಅಂಕ ಪಡೆದು ತೇರ್ಗಡೆಯಾಗಿದ್ದಾರೆ.

ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು:

  • ಪ್ರಥಮ ಭಾಷೆ - 19,125 ವಿದ್ಯಾರ್ಥಿಗಳು
  • ದ್ವಿತೀಯ ಭಾಷೆ -13,458 ವಿದ್ಯಾರ್ಥಿಗಳು
  • ತೃತೀಯ ಭಾಷೆ - 43,126 ವಿದ್ಯಾರ್ಥಿಗಳು
  • ಗಣಿತ - 13,683 ವಿದ್ಯಾರ್ಥಿಗಳು
  • ವಿಜ್ಞಾನ - 6592 ವಿದ್ಯಾರ್ಥಿಗಳು
  • ಸಮಾಜ ವಿಜ್ಞಾನ - 50,782 ವಿದ್ಯಾರ್ಥಿಗಳು

ಗ್ರೇಡಿಂಗ್ ಪಡೆದ ವಿದ್ಯಾರ್ಥಿಗಳು:

  • ಗ್ರೇಡ್ - ವಿದ್ಯಾರ್ಥಿಗಳು- ಶೇಕಡಾವಾರು
  • A+ ಗ್ರೇಡ್- 1,18,875 - 16.48%
  • A ಗ್ರೇಡ್ - 1,82,600 - 25.31%
  • B+ ಗ್ರೇಡ್ - 1,73,528 - 24.06%
  • B ಗ್ರೇಡ್- 1,43,900 - 19.95%
  • C+ ಗ್ರೇಡ್ - 87,801 - 12.17%
  • C ಗ್ರೇಡ್ - 14,627 - 2.03%

ಮಧ್ಯಾಹ್ನ 1 ಗಂಟೆಯ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, https://karresults.nic.in/ ಮೂಲಕ ನೋಡಬಹುದಾಗಿದೆ. ಅಲ್ಲದೆ, ಮಧ್ಯಾಹ್ನ ಆಯಾ ಶಾಲೆಗಳಲ್ಲೂ ಫಲಿತಾಂಶ ಲಭ್ಯವಿರಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೂ ಎಸ್‌ಎಂಎಸ್‌ ಮೂಲಕ ಫಲಿತಾಂಶ ತಲುಪಲಿದೆ.

ಇದನ್ನೂ ಓದಿ:ಎಸ್ಎಸ್ಎಲ್​ಸಿ ಫಲಿತಾಂಶ: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಸಹಾಯವಾಣಿ ಆರಂಭ

Last Updated : May 19, 2022, 1:41 PM IST

ABOUT THE AUTHOR

...view details