ಬೆಂಗಳೂರು:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ರೋಜರ್ ಬಿನ್ನಿ ಬಣ ಗೆಲುವು ಪಡೆದಿದೆ. ಈ ಮೂಲಕ ಎಂ ಹರೀಶ್ ಬಣ ನಿರೀಕ್ಷೆಯಂತೆ ಸೋಲು ಅನುಭವಿಸಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಬಣ ಹಾಗು ಎಂ ಹರೀಶ್ ಬಣದ ಮಧ್ಯೆ ಕೆಎಸ್‌ಸಿಎ ಅದ್ಯಕ್ಷ ಗಾದಿಗಾಗಿ ತೀವ್ರ ಪೈಪೋಟಿ ಕಂಡು ಬಂದಿತ್ತು. ಎರಡು ಬಣದ ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿಯಲು ತಮ್ಮದೇ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದರು. ಆದ್ರೆ, ಚುನಾವಣಾ ಕಣದಲ್ಲಿ ಬಿನ್ನಿ ಮೇಲುಗೈ ಸಾಧಿಸುವುದು ಖಚಿತ ಅಂತ ಫಲಿಂತಾಶಕ್ಕೂ ಮುನ್ನ ಹೇಳಲಾಗುತ್ತಿತ್ತು. ಕೊನೆಗೂ ಈ ಭವಿಷ್ಯ ನಿಜವಾಗಿದೆ. ಸರಿಯಾದ ಕಾಲಾವಕಾಶ ಜೊತೆಗೆ ಸದಸ್ಯರ ಸಂಪರ್ಕಕ್ಕೆ ಮಾಹಿತಿ ಸಿಗದೇ ಕ್ಯಾಪ್ಟನ್ ಎಂ ಎನ್ ಹರೀಶ್ ಬಣ ಚುನಾವಣೆಗೂ ಮುನ್ನವೇ ಸೋತಂತೆ ಕಂಡುಬಂದಿತ್ತು. ಇದೀಗ ನಿರೀಕ್ಷೆಯಂತೆಯೇ ಫಲಿತಾಂಶ ಹೊರಬಂದಿದೆ.