ಬೆಂಗಳೂರು:ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕೆ.ಎಸ್.ಈಶ್ವರಪ್ಪ ತಮಗೆ ಹಂಚಿಕೆಯಾಗಿದ್ದ ವಿಧಾನಸೌಧದ ಕಚೇರಿಗೆ ಪೂಜೆ ಸಲ್ಲಿಕೆ ಮಾಡಿ ಅಧಿಕೃತವಾಗಿ ಪ್ರವೇಶ ಮಾಡಿದರು.
ವಿಧಾನಸೌಧದ ಕಚೇರಿಗೆ ಪೂಜೆ ನೆರವೇರಿಸಿದ ಸಚಿವ ಈಶ್ವರಪ್ಪ - ನೂತನ ಸಚಿವ
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕೆ.ಎಸ್.ಈಶ್ವರಪ್ಪ, ತಮಗೆ ಹಂಚಿಕೆಯಾಗಿದ್ದ ವಿಧಾನಸೌಧದ ಕಚೇರಿಗೆ ಪೂಜೆ ಸಲ್ಲಿಕೆ ಮಾಡಿ ಅಧಿಕೃತವಾಗಿ ಪ್ರವೇಶ ಮಾಡಿದರು.
![ವಿಧಾನಸೌಧದ ಕಚೇರಿಗೆ ಪೂಜೆ ನೆರವೇರಿಸಿದ ಸಚಿವ ಈಶ್ವರಪ್ಪ](https://etvbharatimages.akamaized.net/etvbharat/prod-images/768-512-4231327-thumbnail-3x2-vid.jpg)
ವಿಧಾನಸೌಧದ ಕಚೇರಿಗೆ ಪೂಜೆ ಸಲ್ಲಿಕೆ
ವಿಧಾನಸೌಧದ ಕಚೇರಿ ಪೂಜೆ ನೆರವೇರಿಸಿದ ಕೆ.ಎಸ್.ಈಶ್ವರಪ್ಪ
ಸಚಿವರಿಗೆ ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಕೊಠಡಿಗಳ ಹಂಚಿಕೆಯಾಗಿದ್ದು, ಅದರಂತೆ ಹಂಚಿಕೆಯಾಗಿದ್ದ ವಿಧಾನಸೌಧದ ಕೊಠಡಿ ಸಂಖ್ಯೆ 314ರಲ್ಲಿ ಕೆ.ಎಸ್.ಈಶ್ವರಪ್ಪ ದಂಪತಿಯಿಂದ ವಿಶೇಷ ಪೂಜೆ ಸಲ್ಲಿಸಿ ಕಚೇರಿ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು.
ರಾಹುಕಾಲ ಕಳೆದ ಬಳಿಕ ಕುಟುಂಬ ಸಮೇತರಾಗಿ ಈಶ್ವರಪ್ಪ ಪೂಜೆ ಸಲ್ಲಿಸಿದರು. ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್, ಸೊಸೆ ಹಾಗೂ ಸಂಸದ ಉಮೇಶ್ ಜಾಧವ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಶಾಸಕ ಡಾ. ಅವಿನಾಶ್ ಜಾಧವ್ ಕಚೇರಿ ಪೂಜೆಯಲ್ಲಿ ಭಾಗಿಯಾಗಿದ್ದರು.