ಕರ್ನಾಟಕ

karnataka

ETV Bharat / state

ಅನುಮತಿ ಪಡೆದೇ ಸಿಎಂ ಸಭೆಗೆ ಗೈರಾಗಿರುವೆ : ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟನೆ - KS Eshwarappa latest news

ಶಾಸಕರ ಸಮಾಲೋಚನಾ ಸಭೆಯಲ್ಲಿ ನನ್ನ ಅನುಪಸ್ಥಿತಿಯಿಂದ ಯಾರಿಗೂ ತೊಂದರೆ ಆಗಿಲ್ಲ. ಯಾವ ಶಾಸಕರಿಗೂ ನನ್ನ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ತೃಪ್ತರಾಗಿದ್ದಾರೆ. ರಸ್ತೆ, ಚರಂಡಿ, ದೀಪ, ನೀರು, ಎಲ್ಲವನ್ನು ಮಾಡಿಕೊಡಲಾಗಿದೆ. ನಮ್ಮ ಯಾವುದೇ ಶಾಸಕರಿಗೆ ಅತೃಪ್ತಿ ಇಲ್ಲ ಎಂದು ಸಮರ್ಥಿಸಿಕೊಂಡರು..

KS Eshwarappa clarifies about absent in CM meeting
ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ

By

Published : Jan 8, 2021, 2:59 PM IST

Updated : Jan 8, 2021, 3:29 PM IST

ಬೆಂಗಳೂರು: ಇತ್ತೀಚಿಗೆ ಸಿಎಂ ಯಡಿಯೂರಪ್ಪ ಶಾಸಕರೊಂದಿಗೆ ನಡೆಸಿದ ಸಮಾಲೋಚನಾ ಸಭೆಗೆ ಗೈರಾಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಸಿಎಂ ಹಾಗೂ ರಾಜ್ಯಾಧ್ಯಕ್ಷರ ಅನುಮತಿ ಪಡೆದುಕೊಂಡೇ ಗೈರಾಗಿದ್ದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರ ಒಪ್ಪಿಗೆ ಪಡೆದು ನಾನು ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗಿದ್ದೆ. ರಾಜ್ಯ ಪ್ರವಾಸ ಮಾಡುವಂತ ಸಂದರ್ಭದಲ್ಲಿ ಇಂತಹ ಸನ್ನಿವೇಶಗಳು ಎದುರಾಗುತ್ತವೆ. ಅದೇ ರೀತಿ ಸಿಎಂ ನಡೆಸಿದ್ದ ಒಂದೆರಡು ಸಭೆಯಲ್ಲಿ ಭಾಗವಹಿಸಲು ಆಗಲಿಲ್ಲ. ಹಾಗಂತಾ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟನೆ

ಶಾಸಕರ ಸಮಾಲೋಚನಾ ಸಭೆಯಲ್ಲಿ ನನ್ನ ಅನುಪಸ್ಥಿತಿಯಿಂದ ಯಾರಿಗೂ ತೊಂದರೆ ಆಗಿಲ್ಲ. ಯಾವ ಶಾಸಕರಿಗೂ ನನ್ನ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ತೃಪ್ತರಾಗಿದ್ದಾರೆ. ರಸ್ತೆ, ಚರಂಡಿ, ದೀಪ, ನೀರು, ಎಲ್ಲವನ್ನು ಮಾಡಿಕೊಡಲಾಗಿದೆ. ನಮ್ಮ ಯಾವುದೇ ಶಾಸಕರಿಗೆ ಅತೃಪ್ತಿ ಇಲ್ಲ ಎಂದು ಸಮರ್ಥಿಸಿಕೊಂಡರು.

ವಲಸಿಗರಿಗೆ ಹೆಚ್ಚಿನ ಅನುದಾನ ಸಿಕ್ಕಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎನ್ನುವ ಪ್ರಶ್ನೆಯಿಲ್ಲ. ಬಿಜೆಪಿ ಹಾಲಿನಂತೆ, ಇಲ್ಲಿಗೆ ಬರುವವರು ಸಕ್ಕರೆಯಂತೆ, ಸಕ್ಕರೆ ಹಾಲಿನಲ್ಲಿ ಬೆರೆತರೆ ಎಷ್ಟು ಮಧುರವಾಗಿರುತ್ತದೆಯೋ ಬಿಜೆಪಿಯಲ್ಲಿ ಅಂತಹ ಮಧುರತೆ ಇದೆ ಎಂದರು.

Last Updated : Jan 8, 2021, 3:29 PM IST

ABOUT THE AUTHOR

...view details