ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಆಹ್ವಾನಿಸಲಾಗಿದೆ. 1ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಈ ಪರೀಕ್ಷೆಯ ಅರ್ಹತೆ ಸಂಪಾದಿಸುವುದು ಕಡ್ಡಾಯ. ಶಿಕ್ಷಣ ಇಲಾಖೆ ನಡೆಸುವ ಕೆಎಆರ್ಟಿಟಿಇ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನಾಂಕ. ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ವಿದ್ಯಾರ್ಹತೆ: ಪತ್ರಿಕೆ 1 (1ರಿಂದ 5ನೇ ತರಗತಿ): ಪಿಯುಸಿ ಪರೀಕ್ಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಡ್ ಕೋರ್ಸ್ ತೇರ್ಗಡೆ ಹೊಂದಿರಬೇಕು/ 4 ವರ್ಷದ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್/ ಎರಡು ವರ್ಷದ ಡಿಪ್ಲೋಮೋ ಇನ್ ಎಜುಕೇಶನ್/ ಬಿ.ಎಡ್ ಪದವಿ ಪೂರ್ಣಗೊಳಿಸರಬೇಕು. ಈ ಕೋರ್ಸ್ಗಳ ಪ್ರವೇಶಕ್ಕೆ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.
ಪತ್ರಿಕೆ 2: ಪದವಿಯಲ್ಲಿ ಕನಿಷ್ಠ 50ರಷ್ಟು ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಲ್.ಎಡ್/ ಬಿಇಡಿ ಪದವಿ/ ನಾಲ್ಕು ವರ್ಷದ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್/ ಎರಡು ವರ್ಷದ ಬಿಇಡಿ (ವಿಶೇಷ ಶಿಕ್ಷಣ)ದಲ್ಲಿ ತೇರ್ಗಡೆ ಹೊಂದಿದ ಹಾಗೂ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ: ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಪತ್ರಿಕೆ-1 ಅಥವಾ ಪ್ರತಿಕೆ-2 (ಎರಡರಲ್ಲಿ ಒಂದಕ್ಕೆ ಅರ್ಜಿ ಸಲ್ಲಿಕೆ) ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 700 ರೂ. ಪ.ಜಾ, ಪ. ವರ್ಗ, ಪ್ರವರ್ಗ-1 -350 ರೂಪತ್ರಿಕೆ-1 ಹಾಗೂ ಪತ್ರಿಕೆ-2 (ಎರಡು ಪತ್ರಿಕೆ ಅರ್ಜಿ ಸಲ್ಲಿಕೆಗೆ). ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 1000 ರೂಪ.ಜಾ, ಪ. ವರ್ಗ, ಪ್ರವರ್ಗ-1 -500 ರೂ ಇದೆ.