ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರ ಗಡಿಯಲ್ಲಿನ ಪರಿಸ್ಥಿತಿಯ ವಿವರ ನೀಡಬೇಕು: ಕೃಷ್ಣಬೈರೇಗೌಡ - ಕೇಂದ್ರ ಸರ್ಕಾ

ಭಾರತ-ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಒತ್ತಾಯಿಸಿದ್ದಾರೆ.

krishnabhairegowda
krishnabhairegowda

By

Published : Jun 17, 2020, 3:42 PM IST

ಬೆಂಗಳೂರು:ಭಾರತ-ಚೀನಾ ಗಡಿಯಲ್ಲಿ ಅಧಿಕೃತವಾಗಿ ಏನು ನಡೆಯುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತದ ಗಡಿಯಲ್ಲಿ ಚೀನಾ ಸೇನೆಯ ಘರ್ಷಣೆಯಿಂದ ಈಗಾಗಲೇ ತಿಂಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳು ಕ್ಷಣದಿಂದ ಕ್ಷಣಕ್ಕೆ ಬೇರೆ ಬೇರೆ ರೀತಿಯ ವರದಿ ಮಾಡ್ತಿವೆ. ಉದ್ವಿಗ್ನ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ. ಆದರೆ ಅಧಿಕೃತವಾಗಿ ಏನು ನಡೆದಿದೆ ಎಂಬುದು ತಿಳಿಸ್ತಿಲ್ಲ ಎಂದಿದ್ದಾರೆ.

ಮಾಜಿ ಸಚಿವ ಕೃಷ್ಣಬೈರೇಗೌಡ

ರಕ್ಷಣಾ ಇಲಾಖೆ, ಕೇಂದ್ರ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ‌ ಯೋಧರ ಪರಿಸ್ಥಿತಿಯ ಬಗ್ಗೆಯೂ ಗೊತ್ತಾಗ್ತಿಲ್ಲ. ನಮ್ಮ‌ ಯೋಧರು ಏನಾಗಿದ್ದಾರೆ, ಎಷ್ಟು ಯೋಧರು ಗಾಯಗೊಂಡಿದ್ದಾರೆ? ಇದರ ಬಗ್ಗೆ ಕೇಂದ್ರ ಮಾಹಿತಿ ನೀಡಬೇಕು. ಪ್ರತಿಪಕ್ಷಗಳನ್ನ ಸಭೆ ಕರೆದು ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರ ಜನರನ್ನ ಕತ್ತಲಲ್ಲಿಡುವುದು ಬೇಡ ಎಂದಿದ್ದಾರೆ.

ಊಹಾಪೋಹಗಳ ಆಧಾರದ ಮೇಲೆ ಇರುವುದು ಬೇಡ. ಒಟ್ಟಾರೆಯಾಗಿ ಎಲ್ಲರೂ ಹೋರಾಡಬೇಕಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೃಷ್ಣಬೈರೇಗೌಡ ಒತ್ತಾಯಿಸಿದರು.

ABOUT THE AUTHOR

...view details