ಕರ್ನಾಟಕ

karnataka

ETV Bharat / state

ಐದೇ ನಿಮಿಷದಲ್ಲಿ ಮುಗಿದು ಹೋದ ಕೃಷ್ಣಾ-ಕಾವೇರಿ ಜಲ ನಿಗಮ ಸಭೆ - Board of Directors of Karnataka Kaveri Corporation

ಎರಡೂ ಜಲ ನಿಗಮಗಳು ಅತ್ಯಂತ ಮಹತ್ವದ ತೀರ್ಮಾನ ಕೈಗೊಳ್ಳಬೇಕಿದ್ದು, ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿರುವ ಮಾಹಿತಿ ಆಲಿಸಿ, ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿ ಸಭಾ ಭವನದಿಂದ ತೆರಳಿದರು..

krishna-kaveri-water-corporation-meeting-which-was-over-in-five-minutes
ಐದೇ ನಿಮಿಷದಲ್ಲಿ ಮುಗಿದು ಹೋದ ಕೃಷ್ಣಾ-ಕಾವೇರಿ ಜಲ ನಿಗಮ ಸಭೆ

By

Published : Dec 9, 2020, 4:38 PM IST

ಬೆಂಗಳೂರು :ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತ ಹಾಗೂ ಕರ್ನಾಟಕ ಕಾವೇರಿ ನಿಗಮದ ನಿರ್ದೇಶಕ ಮಂಡಳಿ ಸಭೆ ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಿತು. ಹಲವು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆ ಕೇವಲ 5 ನಿಮಿಷದಲ್ಲಿ ಮುಕ್ತಾಯವಾಯ್ತು.

ಐದೇ ನಿಮಿಷದಲ್ಲಿ ಮುಗಿದು ಹೋದ ಕೃಷ್ಣಾ-ಕಾವೇರಿ ಜಲ ನಿಗಮ ಸಭೆ

ಅತ್ಯಂತ ಮಹತ್ವದ ಸಭೆಯಾಗಿದ್ದ ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತ ಹಾಗೂ ಕರ್ನಾಟಕ ಕಾವೇರಿ ನಿಗಮದ ನಿರ್ದೇಶಕ ಮಂಡಳಿ ಸಭೆ ಕೇವಲ ಐದು ನಿಮಿಷಕ್ಕೆ ಸೀಮಿತವಾಗಿತ್ತು. ಸಿಎಂ ಬಿಎಸ್​ವೈ ಸಭಾ ಕೊಠಡಿಗೆ ಆಗಮಿಸಿ‌ ಸಭೆ ನಡೆಸಿ, ಬಂದಷ್ಟೇ ವೇಗವಾಗಿ ವಾಪಸ್ ತೆರಳಿದರು.

ಎರಡೂ ಜಲ ನಿಗಮಗಳು ಅತ್ಯಂತ ಮಹತ್ವದ ತೀರ್ಮಾನ ಕೈಗೊಳ್ಳಬೇಕಿದ್ದು, ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿರುವ ಮಾಹಿತಿ ಆಲಿಸಿ, ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿ ಸಭಾ ಭವನದಿಂದ ತೆರಳಿದರು.

ABOUT THE AUTHOR

...view details