ಬೆಂಗಳೂರು :ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದಲ್ಲಿನ ಹಲವು ಕೃಷ್ಣ ದೇಗುಲಗಳಲ್ಲಿ ಹಾಗೂ ಇಸ್ಕಾನ್ ದೇವಸ್ಥಾನಗಳಲ್ಲಿ ಸಂಭ್ರಮ ಕಂಡು ಬಂತು. ಆದರೆ, ಕೋವಿಡ್ 3ನೇ ಅಲೆ ಭೀತಿಯ ಹಿನ್ನೆಲೆ ಜನರು ಆನ್ಲೈನ್ ದರ್ಶನದ ಮೊರೆ ಹೋಗಿದ್ದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.
ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ಕೃಷ್ಣಾವತಾರವು ಜಗತ್ತಿನ ಆಗು-ಹೋಗುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶ್ರೀಕೃಷ್ಣನ ಜನ್ಮದಿನದ ಆಚರಣೆ ಪ್ರತಿವರ್ಷ ಭಾದ್ರಪದ ತಿಂಗಳಿನ ಕೃಷ್ಣ ಪಕ್ಷದ 8ನೇ ದಿನ ನಡೆಯುತ್ತದೆ. ಕೃಷ್ಣ, ಪುರಾಣಗಳಲ್ಲಿ ವಿಭಿನ್ನ ಅವತಾರಗಳಲ್ಲಿ ಕಂಡು ಬಂದಿದ್ದಾನೆ ಎಂಬ ಉಲ್ಲೇಖವಿದೆ.
ಜನರನ್ನು, ಆತನನ್ನು ನಂಬಿದ ಭಕ್ತರನ್ನು ವಿಧವಿಧವಾಗಿ ರಕ್ಷಣೆ ಮಾಡಿದ್ದಾನೆ. ಆದ್ದರಿಂದಲೇ ಆತನ ಜನ್ಮದಿನ ಅಷ್ಟಮಿಯನ್ನು ಅಚ್ಚುಕಟ್ಟಾದ ವಿಧಿ-ವಿಧಾನಗಳ ಮೂಲಕ ಆಚರಣೆ ಮಾಡಲಾಗುತ್ತಿದೆ. ಹರೇ ಕೃಷ್ಣ ಜಪ ಮಾಡಿದರೆ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತದೆ ಎನ್ನುತ್ತಾರೆ ರಾಧಾ ಪತಿ ಮಾಧವ್ ದಾಸ್.