ಬೆಂಗಳೂರು :ಈ ವರ್ಷ ಕೊರೊನಾ ವೈರಸ್ ಎಲ್ಲಾ ಹಬ್ಬದ ಆಚರಣೆಯ ಸಂತೋಷ ಕಸಿದಿದೆ. ಆದರೆ, ಈ ನಡುವೆಯೂ ಇಳಿವಯಸ್ಸಿನ ಓರ್ವ ಕೃಷ್ಣನ ಭಕ್ತರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನೂರಾರು ಕೃಷ್ಣನ ಗೊಂಬೆ ಕೂರಿಸಿ ಗಮನ ಸೆಳೆದಿದ್ದಾರೆ.
ಹೆಬ್ಬಾಳ ಸಮೀಪದ ಸಹಕಾರ ನಗರದ ನಿವಾಸಿ 80ರ ಆಸುಪಾಸಿನ ಮೈಸೂರು ತಿರುಮಲಾಚರ್ ಎಂಬುವರು, ಬೇರೆ ಬೇರೆ ರಾಜ್ಯಗಳಲ್ಲಿನ ಕೃಷ್ಣನ ವಿಗ್ರಹಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದು ಎಲ್ಲವನ್ನೂ ಒಟ್ಟುಗೂಡಿಸಿ ಕಥೆಗಳನ್ನು ಸೃಷ್ಟಿಸಿ ನಾನಾ ಅವತಾರಗಳ ಪರಿಚಯ ಮಾಡಿಕೊಡ್ತಾರೆ.