ಕರ್ನಾಟಕ

karnataka

ETV Bharat / state

ಯುವ ಬಿಜೆಪಿ ಅಧ್ಯಕ್ಷನ ಮೇಲೆ ಶಾಸಕ ಕೃಷ್ಣಬೈರೇಗೌಡ ಬೆಂಬಲಿಗರಿಂದ ಹಲ್ಲೆ ಆರೋಪ

ಕೊಡಿಗೆಹಳ್ಳಿ ಯುವ ಬಿಜೆಪಿ ಅಧ್ಯಕ್ಷ ಪ್ರವೀಣ್ ಮೇಲೆ ಶಾಸಕ‌ ಕೃಷ್ಣಬೈರೇಗೌಡ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Young BJP president praveen
ಯುವ ಬಿಜೆಪಿ ಅಧ್ಯಕ್ಷ ಪ್ರವೀಣ್

By

Published : Aug 16, 2021, 12:03 PM IST

ಬೆಂಗಳೂರು: ಕೊಡಿಗೆಹಳ್ಳಿ ಕ್ಷೇತ್ರದ ಬಿಜೆಪಿ ಯುವ ಅಧ್ಯಕ್ಷ ಪ್ರವೀಣ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದು, ಕಾಂಗ್ರೆಸ್​ ಶಾಸಕ ಕೃಷ್ಣಬೈರೇಗೌಡ ಅವರ ಬೆಂಬಲಿಗರ ವಿರುದ್ಧ ಆರೋಪ ಕೇಳಿಬಂದಿದೆ.

ನಗರದ ಜಕ್ಕೂರು ಸಿಗ್ನಲ್ ಬಳಿ ಕಾರು ನಿಲ್ಲಿಸಿದಾಗ ಮತ್ತೊಂದು ಕಾರು ಹಿಂಬದಿಯಿಂದ ಬಂದು ಗುದ್ದಿದೆ. ಪುನಃ ಕೊಡಿಗೆಹಳ್ಳಿ ಸಿಗ್ನಲ್ ಬಳಿ ನನ್ನನ್ನು ಅಡ್ಡಗಟ್ಟಿ ಭಾನುವಾರ ಸಂಜೆ ಹಲ್ಲೆ ಮಾಡಿದ್ದಾರೆ. ನಾವು ಕಾಂಗ್ರೆಸ್​ ಶಾಸಕ‌ ಕೃಷ್ಣಬೈರೇಗೌಡ ಅವರು ಬೆಂಬಲಿಗರು ಎಂದು ಹೇಳಿ ರಾಡ್​ನಿಂದ ಹಲ್ಲೆ ಮಾಡಿದರು. ಬಿಜೆಪಿಯಲ್ಲಿ ನಾನು ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸಲಾಗದೆ ಹಲ್ಲೆ ಮಾಡಿದ್ದಾರೆ ಎಂದು ಪ್ರವೀಣ್ ಆರೋಪಿಸಿದ್ದಾರೆ.

ಕೊಡಿಗೆಹಳ್ಳಿ ಕ್ಷೇತ್ರದ ಬಿಜೆಪಿ ಯುವ ಅಧ್ಯಕ್ಷ ಪ್ರವೀಣ್ ಹಲ್ಲೆ ಆರೋಪ

ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟರು ಸಹ ಸ್ವೀಕರಿಸುತ್ತಿಲ್ಲ, ಶಾಸಕ ಕೃಷ್ಣಬೈರೇಗೌಡರು ಪೊಲೀಸರ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು, ದೂರು ಸ್ವೀಕರಿಸದಿದ್ದರೆ ಇಂದು ಧರಣಿ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಅವರನ್ನು ಬಿಜೆಪಿ ಕಾರ್ಯಕರ್ತರು ಭೇಟಿ ಮಾಡಿ ದೂರು ನೀಡಲು ಮುಂದಾಗಿದ್ದಾರೆ. ಗಲಾಟೆಗೆ ನಿಜವಾದ ಕಾರಣ ಏನು ಎನ್ನುವುದು ನಿಗೂಢವಾಗಿದೆ.

ಸದ್ಯಕ್ಕೆ ಗಾಯಾಳು ಪ್ರವೀಣ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದು ಆಕಸ್ಮಿಕವಾಗಿ ನಡೆದ ಗಲಾಟೆಯೋ?, ಅಥವಾ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಲಾಗಿದೆಯೋ ಎಂಬ ಅನುಮಾನ ಪೊಲೀಸರಿಗೆ ಕಾಡುತ್ತಿದೆ.

ABOUT THE AUTHOR

...view details