ಕರ್ನಾಟಕ

karnataka

ETV Bharat / state

ಆಲಮಟ್ಟಿಗೆ ಸ್ಥಳಾಂತರವಾಗದ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ: ಸರ್ಕಾರದ ಆದೇಶದ ನಿರ್ಲಕ್ಷ್ಯ - ಉತ್ತರಕರ್ನಾಟಕ ರೈತರ ಅಭಿವೃದ್ಧಿ ಸಂಘ

ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡಲು ಸರ್ಕಾರ ಈಗಾಗಲೇ ಆದೇಶ ಮಾಡಿದೆ. ಆದ್ರೆ ಇದಕ್ಕೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅನ್ನುತ್ತಿದ್ದಾರೆ.

ಉತ್ತರಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್
ಉತ್ತರಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್

By

Published : Aug 24, 2022, 8:00 PM IST

ಬೆಂಗಳೂರು: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಕೃಷ್ಣ ಭಾಗ್ಯ ಜಲ ನಿಗಮ ಯೋಜನೆ ಇನ್ನೂ ಯೋಜನೆಯಾಗಿಯೇ ಉಳಿದಿದೆ. ಸರ್ಕಾರ ಎರಡೆರಡು ಬಾರಿ ಅಧಿಕಾರಿಯ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರ ಮಾಡುವಂತೆ ಆದೇಶ ಹೊರಡಿಸಿದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯದ ಮನಸ್ಥಿತಿ ತೋರುತ್ತಿದ್ದಾರೆ.

ಜಲ ನಿಗಮದ ಕಚೇರಿಯನ್ನು ಸ್ಥಳಾಂತರಿಸುವಂತೆ ಕೆ.ಬಿ.ಜೆ.ಎನ್.ಎಲ್ ಎಂಡಿ ಶಿವಕುಮಾರ್​​ಗೆ ಸರ್ಕಾರ ಸೂಚನೆ ನೀಡಿದೆ. ಆದ್ರೆ ಈ ಅಧಿಕಾರಿ ಮಾತ್ರ ಬೆಂಗಳೂರು ಕಚೇರಿಯಲ್ಲೇ ಇದ್ದಾರೆ. ಈ ಕುರಿತ ಹೋರಾಟ ತೀವ್ರಗೊಳಿಸಲು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ಮುಂದಾಗಿದ್ದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಉತ್ತರಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್

ಜಲಸಂಪನ್ಮೂಲ ಇಲಾಖೆ ಸೂಚನೆ: ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್ ಎನ್ ಜವಳಿ ನೇತೃತ್ವದ್ಲಲ್ಲಿ ರೈತರು ಇಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದರು. ಸರ್ಕಾರದ ಆದೇಶದ ಪ್ರಕಾರ, ಕೆ.ಬಿ.ಜೆ.ಎನ್.ಎಲ್ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡದಿರುವ ಬಗ್ಗೆ ವಿವರಣೆ ಕೋರಿದರು. ನಿಗದಿತ ಅವಧಿಯೊಳಗೆ ಸ್ಥಳಾಂತರ ಪ್ರಕ್ರಿಯೆ ಮುಗಿಸಲು ಜಲಸಂಪನ್ಮೂಲ ಇಲಾಖೆ ಸೂಚನೆ ನೀಡಿದ್ದರೂ ಇನ್ನೂ ಬೆಂಗಳೂರಿನಲ್ಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಆಲಮಟ್ಟಿ ಜಲಾಶಯದ ವಿದ್ಯುತ್ ಉತ್ಪಾದನೆಯ 6 ಘಟಕಗಳು ಸ್ಥಗಿತ

ABOUT THE AUTHOR

...view details