ಕರ್ನಾಟಕ

karnataka

ETV Bharat / state

ಕುರುಬ ಸಮಾಜದ ಪಾದಯಾತ್ರೆಯಲ್ಲಿ ಕೆಆರ್​​ಪುರಂ ಠಾಣೆಯ ಇನ್ಸ್‌ಪೆಕ್ಟರ್ ಅಂಬರೀಶ್ - Bangalore

ಇಂದು ಪ್ರತಿಭಟನೆಯಲ್ಲಿ ಇನ್ಸ್‌ಪೆಕ್ಟರ್ ಅಂಬರೀಶ್ ಭಾಗಿಯಾಗಿ ರಸ್ತೆಯುದ್ದಕ್ಕೂ ನಗಾರಿ ಬಾರಿಸಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಸಖತ್ ಮನರಂಜನೆ ನೀಡಿದ್ದಾರೆ..

KR Puram station Inspector Ambarish
ಕುರುಬ ಸಮಾಜದ ಪ್ರತಿಭಟನೆಯಲ್ಲಿ ಕೆಆರ್​​ಪುರಂ ಠಾಣೆಯ ಇನ್ಸ್‌ಪೆಕ್ಟರ್ ಅಂಬರೀಶ್ ಭಾಗಿ

By

Published : Jan 31, 2021, 7:34 PM IST

ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿನ ಕಡೆ ಬರುತ್ತಿರುವ ಪಾದಯಾತ್ರೆಯಲ್ಲಿ ಕೆಆರ್​​ಪುರಂ ಠಾಣೆಯ ಇನ್ಸ್‌ಪೆಕ್ಟರ್ ಅಂಬರೀಶ್ ಭಾಗಿಯಾಗಿದ್ದಾರೆ.

ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡ ಇನ್ಸ್‌ಪೆಕ್ಟರ್ ಅಂಬರೀಶ್ ಅವರು ನಗಾರಿ ಡೊಳ್ಳು ಬಾರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕುರುಬ ಸಮಾಜವನ್ನು ಎಸ್​​ಟಿಗೆ ಸೇರಿಸುವಂತೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಕಿ.ಮೀ ದೂರದಿಂದ ಕಾಲ್ನಡಿಗೆ ಮೂಲಕ ಬೆಂಗಳೂರಿಗೆ ಬರುತ್ತಿದ್ದು, ಸ್ವಾಮೀಜಿಯೊಂದಿಗೆ ಹೆಜ್ಜೆ ಹಾಕುವವರ ಸಂಖ್ಯೆಯೂ ಅಧಿಕವಾಗುತ್ತಿದೆ.

ಓದಿ: ಎಸ್​ಟಿ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆಗೆ ಹೆಚ್ ವಿಶ್ವನಾಥ್ ಸಾಥ್​

ಇಂದು ಪ್ರತಿಭಟನೆಯಲ್ಲಿ ಇನ್ಸ್‌ಪೆಕ್ಟರ್ ಅಂಬರೀಶ್ ಭಾಗಿಯಾಗಿ ರಸ್ತೆಯುದ್ದಕ್ಕೂ ಡೊಳ್ಳು ಬಾರಿಸಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಸಖತ್ ಮನರಂಜನೆ ನೀಡಿದ್ದಾರೆ.

ಕಳೆದ ವರ್ಷ ಫೆ.4ರಂದು ಸಚಿವ ಬೈರತಿ ಬಸವರಾಜ್ ಅವರ ಹುಟ್ಟುಹಬ್ಬಕ್ಕೆ ಬೆಳ್ಳಿ ಗದೆ ನೀಡಿ ಬೈರತಿ ಬಸವರಾಜ್ ಅಣ್ಣಾಗೆ ಜೈ ಜೈ ಎಂದು ಘೋಷಣೆ ಕೂಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ABOUT THE AUTHOR

...view details