ಕೆ.ಆರ್ ಪುರ(ಬೆಂಗಳೂರು):ಕಟ್ಟಡ ನಿರ್ಮಾಣ ಕಂಪನಿಯೊಂದು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿನೂರಾರು ಕಾರ್ಮಿಕರನ್ನು ಒಂದೆಡೆ ಕೂಡಿ ಹಾಕಿ ಲಾಕ್ಡೌನ್ ಉಲ್ಲಂಘಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು: ಲಾಕ್ಡೌನ್ ಉಲ್ಲಂಘಿಸಿ ನೂರಾರು ಕಾರ್ಮಿಕರನ್ನ ಕೂಡಿ ಹಾಕಿದ ಕಟ್ಟಡ ನಿರ್ಮಾಣ ಸಂಸ್ಥೆ! - ಬೆಂಗಳೂರು ಕೆ.ಆರ್ ಪುರ್
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬನಹಳ್ಳಿ ಬಳಿ ಪ್ರತಿಷ್ಠಿತ ಸುಮಧುರಾ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಮಿಕರಿಗೆ ಊಟ ಬಡಿಸುವ ವಿಚಾರಕ್ಕೆ ಸೆಕ್ಯೂರಿಟಿಯೊಬ್ಬ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ನೂರಾರು ಕಾರ್ಮಿಕರು ಕಟ್ಟಡ ನಿರ್ಮಾಣ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.

ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರವೂ ಇಲ್ಲದೆ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಮಿಕರನ್ನು ಸಮಾಧಾನ ಮಾಡಲು ಮುಂದಾದರೂ ಪ್ರಯೋಜನವಾಗಿಲ್ಲ. ಈ ವೇಳೆ ಅವರ ರಾಜ್ಯಕ್ಕೆ ಕಳುಹಿಸಿಕೊಡುವಂತೆ ಪೊಲೀಸರ ಎದುರೇ ವಲಸೆ ಕಾರ್ಮಿಕರು ಅಂಗಲಾಚಿದರು.