ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ಪ್ರಥಮ ದರ್ಜೆ ಸಹಾಯಕ ಹುದ್ದೆ (ಎಫ್ ಡಿಎ) ಪರೀಕ್ಷೆಯನ್ನು ಫೆಬ್ರವರಿ 28 ರಂದು ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ.
ಪರೀಕ್ಷಾರ್ಥಿಗಳಿಗೆ ಶುಭ ಸುದ್ದಿ: ಫೆಬ್ರವರಿ 28 ರಂದು ಎಫ್ಡಿಎ ಪರೀಕ್ಷೆ - ಕೆಪಿಎಸ್ಸಿ
ಕಳೆದ ತಿಂಗಳು ಜ.24ರಂದು ಕೆಪಿಎಸ್ಸಿ ಪರೀಕ್ಷೆ ನಿಗದಿಯಾಗಿತ್ತು. ಎಲ್ಲ ಸಿದ್ದತೆಯಲ್ಲಿ ತೊಡಗಿರುವಾಗಲೇ ಜನವರಿ 23 ರಂದು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಅನ್ನೋದು ಬೆಳಕಿಗೆ ಬಂತು. ಹಾಗಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಫೆ.28 ರಂದು ಎಫ್ಡಿಎ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್ಸಿ ತಿಳಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸ್ಪೆನೋಗ್ರಾಫರ್ ಸನಾಬೇಡಿ, ಎಸ್ಡಿಎ ನೌಕರ ರಮೇಶ್ ಹೆರಕಲ್, ಪೊಲೀಸ್ ಕಾನ್ ಸ್ಟೇಬಲ್ ಮುಸ್ತಾಕ್ ಕ್ವಾಟಿ ನಾಯಕ್, ಅಕೌಂಟ್ ಟೆಂಟ್ ಬಸವರಾಜು ಸೇರಿದಂತೆ 18 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.