ಬೆಂಗಳೂರು: ಕೊರೊನಾ ಭಯದ ನಡುವೆಯೇ ಇಂದು ಕೆಪಿಎಸ್ಸಿ ಪರೀಕ್ಷೆ ನಡೆಯುತ್ತಿದೆ.
ರಾಜ್ಯಾದ್ಯಂತ ಇಂದು ಕೆಪಿಎಸ್ಸಿ ಪರೀಕ್ಷೆ ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯಲಿದ್ದು, ರಾಜ್ಯಾದ್ಯಂತ 1.6 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ಎ ವೃಂದದ ಸಹಾಯಕ ನಿಯಂತ್ರಕರ ಹುದ್ದೆ, ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಪಡಿಸಲಾಗಿದೆ.
ಮೊದಲ ಪರೀಕ್ಷೆ ಬೆಳಗ್ಗೆ 10 ಗಂಟೆಯಿಂದ 12ರವರೆಗೆ ನಂತರ ಮಧ್ಯಾಹ್ನ 2-4ರವರೆಗೆ ಎರಡನೇ ಪರೀಕ್ಷೆ 400 ಅಂಕಗಳಿಗೆ ನಡೆಯಲಿದೆ. ಪ್ರಸ್ತುತ ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಹಾಗೂ ಸುಗಮವಾಗಿ ನಡೆಸಲು ಎಸ್ಒಪಿಯನ್ನು ಸಿದ್ಧಪಡಿಸಲಾಗಿದೆ.
1. ಪರೀಕ್ಷಾ ಮುಖ್ಯ ದ್ವಾರದಲ್ಲಿ ಅಭ್ಯರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಮಾಡಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲು ವ್ಯವಸ್ಥೆ ಮಾಡಬೇಕು.
2. ಅಭ್ಯರ್ಥಿಗಳಿಗೆ ಪ್ರವೇಶ ಪತ್ರದ ಸೂಚನೆಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಅದರಂತೆ ಪರೀಕ್ಷಾರ್ಥಿಗಳು 2 ಗಂಟೆ ಮೊದಲು ಹಾಜರಿರಬೇಕು.
3. ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮುಂಚೆ ಮುಖ್ಯ ದ್ವಾರ ತೆರೆದಿಡಬೇಕು.
4 ಪರೀಕ್ಷಾ ಕೇಂದ್ರದ ಒಳ ಆವರಣಕ್ಕೆ ಪ್ರವೇಶಿಸಿದ ಕೂಡಲೇ ಅಭ್ಯರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೊಠಡಿ/ಹಾಲ್‌ಗಳಿಗೆ ತೆರಳಿ ನಿಗದಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳಬೇಕು. ಅದನ್ನು ಬಿಟ್ಟು ಪಡಸಾಲೆಯಲ್ಲಿ ಅನವಶ್ಯಕವಾಗಿ ಓಡಾಡಬಾರದು. ಅಲ್ಲದೇ ಪರೀಕ್ಷಾ ಕೇಂದ್ರದ ಆವರಣದಲ್ಲಿ ಅಭ್ಯರ್ಥಿಗಳು ಗುಂಪು ಸೇರಬಾರದು.
8. ದೈಹಿಕ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಆರಕ್ಷಕರು/ಪರೀಕ್ಷಾ ಸಿಬ್ಬಂದಿ ವೀಕ್ಷಣೆ ಮೂಲಕ ಖಚಿತಪಡಿಸಿಕೊಳ್ಳುವುದು.
9.ಪರೀಕ್ಷೆ ಕೊಠಡಿಗೆ ನಿಯೋಜಿಸಲಾಗಿರುವ ವೀಕ್ಷಕರು ಪರೀಕ್ಷೆ ಪ್ರಾರಂಭವಾಗುವ ಮುಂಚೆ ಅವರಿಗೆ ಹಂಚಿಕೆ ಮಾಡಿರುವ ಕೊಠಡಿಗೆ ತೆರಳಿ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿರುವ ಆಸನಗಳಲ್ಲಿ ಕುಳಿತಿರುವುದನ್ನು ಗಮನಿಸಬೇಕು. ಹಾಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಅಡ್ಡಾಡದಂತೆ ನೋಡಿಕೊಳ್ಳಬೇಕು.
7. ಪರೀಕ್ಷೆಗಳನ್ನು ಪ್ರಾರಂಭಿಸಿ ನಿಗದಿತ ಸಮಯಕ್ಕೆ 10 ನಿಮಿಷಗಳ ಮುನ್ನ ಪರೀಕ್ಷಾ ಕೇಂದ್ರಗಳ ಮುಖ್ಯ ದ್ವಾರಗಳನ್ನು ಮುಚ್ಚಬೇಕು.
8. ಮಧ್ಯಾಹ್ನದ ಊಟದ ಸಮಯದಲ್ಲಿ ಅಭ್ಯರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಕೇಂದ್ರದ ಆವರಣದಲ್ಲಿ ಗುಂಪುಗೂಡದಂತೆ ಕ್ರಮ ವಹಿಸುವುದು.
ಆಸನ ವ್ಯವಸ್ಥೆ: ಆಯೋಗದಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಸೂಚನೆಗಳನ್ವಯ ಪರೀಕ್ಷಾ ಕೊಠಡಿಯಲ್ಲಿ ಆಸನ ವ್ಯವಸ್ಥೆ ಕೇಂದ್ರ ಸರ್ಕಾರದ ದೈಹಿಕ ಅಂತರದ ಮಾನದಂಡದ ಅನ್ವಯ ಪ್ರತಿಯೊಬ್ಬ ಅಭ್ಯರ್ಥಿ ಅಂದಾಜು 2 ಮೀಟರ್ (6 feet) ಅಂತರವನ್ನು ಕಾಯ್ದುಕೊಳ್ಳುವ ಪದ್ಧತಿಯಂತೆ ಆಸನ ವ್ಯವಸ್ಥೆ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ಕೇಂದ್ರ ಸರ್ಕಾರದ ದೈಹಿಕ ಮಾನದಂಡಗಳ ಅನ್ವಯ ಅಭ್ಯರ್ಥಿಗೆ 2 ಮೀಟರ್ (6 feet) ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು.
ಪ್ರತೀ ಕೊಠಡಿಯಲ್ಲಿ ದೈಹಿಕ ಅಂತರ ಕನಿಷ್ಠ 3 ಅಡಿ ಕಾಪಾಡಿಕೊಳ್ಳಬೇಕು. ಪ್ರತೀ ಕೊಠಡಿಯಲ್ಲಿ ಗರಿಷ್ಠ 24 ಅಭ್ಯರ್ಥಿಗಳಿರಬೇಕು. ಒಂದು ಬೆಂಚಿನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಒಂದು ಸಾಲಿನಲ್ಲಿ 6 ಬೆಂಚುಗಳಂತೆ 2 ಸಾಲುಗಳಲ್ಲಿ ಒಟ್ಟು 12 ಬೆಂಚುಗಳನ್ನು ಅಳವಡಿಸುವುದು. ಪ್ರತೀ ಡೆಸ್ಕ್ ನಡುವೆ ಕನಿಷ್ಠ 3 ಅಡಿಗಳ ಅಂತರ ಇರಬೇಕು. ವಿಶೇಷ ಕೊಠಡಿಯಲ್ಲಿ ಪ್ರತಿ ಡೆಸ್ಕ್ಗೆ ಒಬ್ಬ ಅಭ್ಯರ್ಥಿ ಇರಬೇಕು ಹಾಗೂ ಪ್ರತೀ ಡೆಸ್ಕ್ಗಳ ನಡುವೆ ಕನಿಷ್ಠ ಆರು ಅಡಿ ಅಂತರ ಇರಬೇಕು ಎಂದು ಸೂಚಿಸಲಾಗಿದೆ.