ಕರ್ನಾಟಕ

karnataka

ETV Bharat / state

KPSC Jobs: ಕಮರ್ಷಿಯಲ್​ ಟ್ಯಾಕ್ಸ್​ ಅಫೀಸರ್​ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಪಿಎಸ್​ಸಿ

ಈ ಹಿಂದೆ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್​ 30 ಆಗಿದ್ದು, ಇದೀಗ ಈ ದಿನಾಂಕವನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.

KPSC  Commercial Tax officer recruitment last date extended
KPSC Commercial Tax officer recruitment last date extended

By ETV Bharat Karnataka Team

Published : Oct 3, 2023, 5:14 PM IST

ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) ವಾಣಿಜ್ಯ ಪರಿವೀಕ್ಷಕರ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಿದೆ. ಒಟ್ಟು 230 ಹುದ್ದೆಗಳ ಭರ್ತಿಗೆ ಕಳೆದ ತಿಂಗಳು ಕೆಪಿಎಸ್​ಸಿ ಅರ್ಜಿ ಆಹ್ವಾನಿಸಿದ್ದು, ಸೆಪ್ಟೆಂಬರ್​ 30 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಿತ್ತು. ಆದರೆ, ಇದೀಗ ಅರ್ಜಿ ಸಲ್ಲಿಕೆ ದಿನಾಂಕವನ್ನು ಅಕ್ಟೋಬರ್​ 31ರವರೆಗೆ ವಿಸ್ತರಿಸಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ (ಹೈದರಾಬಾದ್​ ಕರ್ನಾಟಕ) ಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 20 ಆಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಇನ್ನೂ ಅವಕಾಶ ಇದ್ದು, ಅರ್ಜಿ ಸಲ್ಲಿಸಬಹುದಾಗಿದೆ.

ದಿನಾಂಕ ವಿಸ್ತರಣೆಯ ಅಧಿಸೂಚನೆ

ಹುದ್ದೆ ವಿವರ: ಗ್ರೂಪ್​ ಸಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ 230 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕಲ್ಯಾಣ​ ಕರ್ನಾಟಕ ವೃಂದಕ್ಕೆ 15 ಹುದ್ದೆಗಳನ್ನು ಮೀಸಲಿರಿಸಲಾಗಿದ್ದು, ಒಟ್ಟು 245 ಹುದ್ದೆಗಳ ಭರ್ತಿ ನಡೆಯಲಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪಡೆದಿರಬೇಕು. ಪದವಿಯಲ್ಲಿ ಒಂದು ವಿಷಯ ಅರ್ಥಶಾಸ್ತ್ರ ಅಥವಾ ಗಣಿತವನ್ನು ಅಧ್ಯಯನ ಮಾಡಿರಬೇಕು. ಅಥವಾ ಕಾಮರ್ಸ್​​ ಪದವಿಯನ್ನು ಅಧ್ಯಯನ ಮಾಡಿರಬೇಕು.

ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ 18 ವರ್ಷವಾಗಿದ್ದು, ಗರಿಷ್ಠ ವಯೋಮಿತಿ 35ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು 3 ವರ್ಷ ಮತ್ತು ಪ. ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವೇತನ: ಈ ಹುದ್ದೆಗಳಿಗೆ ಮಾಸಿಕ 33,450 ರೂ. ನಿಂದ 62,600 ರೂ. ವೇತನ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಮಾಜಿ ಸೇವಾ ಅಭ್ಯರ್ಥಿಗಳಿಗೆ 50 ರೂ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 300 ರೂ. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು.

ಈ ಹುದ್ದೆಗಳಿಗೆ ಸೆಪ್ಟೆಂಬರ್​ 1ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​​​ 31 ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kpsc.kar.nic.in ಈ ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: ಚಿತ್ರದುರ್ಗ ಡಿಸಿಸಿ ಬ್ಯಾಂಕ್​ನಲ್ಲಿ ಎಫ್​ಡಿಎ, ಎಸ್​ಡಿಎ ನೇಮಕಾತಿ; 68 ಹುದ್ದೆಗಳಿಗೆ ಅರ್ಜಿ ಆಹ್ವಾನ

ABOUT THE AUTHOR

...view details