ಕರ್ನಾಟಕ

karnataka

ETV Bharat / state

ಕೆಪಿಎಲ್ ಹಗರಣ: ಬಳ್ಳಾರಿ ಟಸ್ಕರ್ಸ್​​ ತಂಡದ ಮೂವರಿಗೆ ಹೈ ಕೋರ್ಟ್​ನಿಂದ ರಿಲೀಫ್​ - KPL scandal

ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ರೆಡ್ಡಿ, ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದರು. ಇವರು ಕೆಪಿಎಲ್ ಹಗರಣ ಬೆಳಕಿಗೆ ಬರ್ತಾ ಇದ್ದ ಹಾಗೆ ತಲೆ ಮರೆಸಿಕೊಂಡಿದ್ದರು.

ಕೆಪಿಎಲ್ ಹಗರಣ,  KPL scam
ಕೆಪಿಎಲ್ ಹಗರಣ

By

Published : Dec 12, 2019, 5:48 AM IST

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪಿಗಳಾದ ಸಿ.ಎಂ.ಗೌತಮ್, ಅಬ್ರಾರ್ ಖಾಜಿ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದ್ರೆ, ಬಳ್ಳಾರಿ ಬಳ್ಳಾರಿ ಟಸ್ಕರ್ಸ್​​ ತಂಡದ ಮಾಲೀಕ ಅರವಿಂದ ರೆಡ್ಡಿಗೆ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರು ನೀಡಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ರೆಡ್ಡಿ, ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದರು. ಇವರು ಕೆಪಿಎಲ್ ಹಗರಣ ಬೆಳಕಿಗೆ ಬರ್ತಾ ಇದ್ದ ಹಾಗೆ ತಲೆ ಮರೆಸಿಕೊಂಡಿದ್ದರು. ಇನ್ನು ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಈ‌ಮೂವರಿಗೆ ಹೈಕೋರ್ಟ್​ನಿಂದ ರಿಲೀಫ್ ಸಿಕ್ಕಿದೆ.

ನ್ಯಾಯಲಯ ಆರೋಪಿಗಳಿಗೆ 2 ಲಕ್ಷದ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸದಂತೆ ಹಾಗೂ ತನಿಖೆಗೆ ಸಹಕಾರ ನೀಡಬೇಕೆಂದು ಸೂಚನೆಗಳನ್ನ ನೀಡಿದೆ.

ABOUT THE AUTHOR

...view details