ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪ್ರಮುಖ ಆಟಗಾರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ರಣಜಿ ತಂಡದ ಮಾಜಿ ವಿಕೆಟ್ ಕೀಪರ್ ಸಿ.ಎಂ ಗೌತಮ್, ಆಲ್ರೌಂಡರ್ ಅಬ್ರಾರ್ ಖಾಜಿ ಬಂಧಿತ ಫಿಕ್ಸಿಂಗ್ ಪ್ಲೇಯರ್ಗಳು. ಇಬ್ಬರೂ ಬಳ್ಳಾರಿ ಟೀಂ ಪ್ಲೇಯರ್ಸ್ಳಾಗಿದ್ದು, ಗೌತಮ್ ಬಳ್ಳಾರಿ ಟೀಂ ನ ನಾಯಕರಾಗಿದ್ದರು. ಕೆಪಿಎಲ್ನ 2019 ರ ಹುಬ್ಬಳ್ಳಿ ಮತ್ತು ಬಳ್ಳಾರಿ ನಡುವಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಸ್ಲೋ ಬ್ಯಾಟಿಂಗ್ ಸೇರಿದಂತೆ ಇನ್ನಿತರ ವಿಚಾರಗಳಿಗೆ 20 ಲಕ್ಷಕ್ಕೆ ಫಿಕ್ಸಿಂಗ್ ಮಾಡಿಕೊಂಡಿದ್ರು ಎಂದು ತನಿಖೆಯಿಂದ ತಿಳಿದುಬಂದಿದೆ.