ಕರ್ನಾಟಕ

karnataka

ETV Bharat / state

ಕೆಪಿಎಲ್​​ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಕೋಚ್ ಸುರೇಂದ್ ಸಿಂಧೆ ಮನೆ ಮೇಲೆ ಸಿಸಿಬಿ ದಾಳಿ - ಕೆಪಿಎಲ್​​ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ

ಕೆಪಿಎಲ್​​ ಮ್ಯಾಚ್​​ ಫಿಕ್ಸಿಂಗ್​​ ಹಗರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಕೋಚ್ ಸುರೇಂದ್ ಸಿಂಧೆ ಮನೆ ಮೇಲೆ ದಾಳಿ ನಡೆಸಿದ್ದಾರೆ.

KPL match fixing
ಕೆಪಿಎಲ್​​ ಮ್ಯಾಚ್ ಫಿಕ್ಸಿಂಗ್ ಪ್ರಕರಣ

By

Published : Dec 2, 2019, 4:11 PM IST


ಬೆಂಗಳೂರು:ಕೆಪಿಎಲ್​​ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬೆಳಗಾವಿ ಟೀಂ ಕೋಚ್ ಹಾಗೂ ಕರ್ನಾಟಕದ ಅಂಡರ್ 19 ಟೀಂ ಕೋಚ್ ಆಗಿರುವ ಸುರೇಂದ್ ಸಿಂಧೆ ಮನೆ ಮೇಲೆ ದಾಳಿ‌ ನಡೆಸಿದ್ದಾರೆ.

ಸಿಲಿಕಾನ್ ಸಿಟಿಯ ದೊಮ್ಮಲೂರು ಬಳಿ ಸುರೇಂದ್ ಸಿಂಧೆ ಮನೆ ಹೊಂದಿದ್ದು, ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಕುರಿತು ಕೆಲ ದಾಖಲೆಗಳನ್ನ ಹೊಂದಿರುವ ಕಾರಣ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಟೀಂ ಕೋಚ್ ಮಾತ್ರವಲ್ಲದೇ ಕೆಎಸ್​​ಸಿಎ ವ್ಯವಸ್ಥಾಪಕರಾಗಿರುವ ಸುರೇಂದ್ರ ಶಿಂಧೆ, ಕೆಪಿಎಲ್ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಪ್ರಮುಖ ಆಟಗಾರರು ಹಾಗು ಬುಕ್ಕಿಗಳ ಜೊತೆ ಸೇರಿಕೊಂಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ABOUT THE AUTHOR

...view details