ಕರ್ನಾಟಕ

karnataka

ETV Bharat / state

KPL ಮ್ಯಾಚ್​​ ಫಿಕ್ಸಿಂಗ್​​​ ಪ್ರಕರಣ: ವಿಚಾರಣೆ ವೇಳೆ ಸ್ಫೋಟಕ‌ ಮಾಹಿತಿ ಬಹಿರಂಗ! - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಕೆಪಿಎಲ್​​​​ ಮ್ಯಾಚ್‌ ಫಿಕ್ಸಿಂಗ್ ಪ್ರಕರಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ಅಲಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆತನಿಂದ ಹಲವಾರು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೇ ದುಬೈ ಮೂಲದ ಬುಕ್ಕಿಗಳು, ಪ್ರತಿಷ್ಠಿತ ಆಟಗಾರರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

KPL ಮ್ಯಾಚ್‌ ಫಿಕ್ಸಿಂಗ್ ಸ್ಫೋಟಕ‌ ಮಾಹಿತಿ ಬೆಳಕಿಗೆ

By

Published : Oct 3, 2019, 4:14 PM IST

ಬೆಂಗಳೂರು:ಕೆಪಿಎಲ್​​​​ ಮ್ಯಾಚ್‌ ಫಿಕ್ಸಿಂಗ್ ಪ್ರಕರಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ಅಲಿಯನ್ನು ಬಂಧಿಸಿರುವ ಸಿಸಿಬಿ ತಂಡ ಹಲವು ಮಾಹಿತಿ ಕಲೆಹಾಕಿದೆ. ಬೆಳಗಾವಿ ಪ್ಯಾಂಥರ್ಸ್ ಅಲಿ ಮ್ಯಾಚ್ ಫಿಕ್ಸಿಂಗ್ ಮಾತ್ರವಲ್ಲದೇ ಹವಾಲಾ ದಂಧೆಕೋರರ ಜೊತೆ ಕೂಡ ದಂಧೆ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.

ಇದರಲ್ಲಿ ದುಬೈ ಮೂಲದ ಬುಕ್ಕಿಗಳು ಹಾಗೂ ಹಲವಾರು ಮಂದಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಮ್ಯಾಚ್ ಫಿಕ್ಸಿಂಗ್​​ನಲ್ಲಿ ಹಲವಾರು ಪ್ರತಿಷ್ಠಿತ ಆಟಗಾರರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬಯಾಲಾಗಿದೆ.

KPL ಮ್ಯಾಚ್‌ ಫಿಕ್ಸಿಂಗ್ ಸ್ಫೋಟಕ‌ ಮಾಹಿತಿ ಬೆಳಕಿಗೆ

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಪೊಲೀಸರು ಕೆಎಸ್​​ಸಿಎಗೆ ಪತ್ರ ಬರೆದಿದ್ದಾರೆ. ಕ್ರಿಕೆಟ್‌ ಪಂದ್ಯದ ನಿಯಮಾವಳಿಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ಯಾವುದೇ ಕ್ರಿಕೆಟ್ ತಂಡದ ಮಾಲೀಕರು ಬೆಟ್ಟಿಂಗ್ ಆಡುವ ಹಾಗಿಲ್ಲ. ಅದು ಕ್ರಿಕೆಟ್ ನಿಮಯಾವಳಿಯ ಪ್ರಕಾರ ಅಪರಾಧ. ಇದು ಗೊತ್ತಿದ್ದು ಅಲಿ ಬೆಟ್ಟಿಂಗ್ ಆಡಿದ್ದು ಅಪರಾಧವಾಗಿದೆ.
ಇದುವರೆಗೆ ಒಟ್ಟು 15 ಬಿ ಗ್ರೇಡ್ ಆಟಗಾರರ ವಿಚಾರಣೆ ಮುಗಿದಿದೆ. KPL-2019 ಸೀಸನ್​ನಲ್ಲಿ ಆಡಿದ ಕೆಲ ಆಟಗಾರರು ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವುದು ಕನ್ಫರ್ಮ್ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರು ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details