ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಐಪಿಎಲ್ ಆಟಗಾರ ಕೆ. ಸಿ. ಕಾರ್ಯಪ್ಪ ಅಲಿಯಾಸ್ ಕ್ಯಾರಿಯ ಹೆಸರು ಕೇಳಿಬಂದ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ಇಂದು ಮತ್ತೆ ವಿಚಾರಣೆ ನಡೆಸಿದ್ದಾರೆ.
ಸಿಸಿಬಿಯ ಹಿರಿಯ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಕೆ.ಸಿ. ಕಾರ್ಯಪ್ಪನನ್ನು ವಿಚಾರಣೆ ನಡೆಸಲಾಗುತ್ತಿದೆ. ಕಾರ್ಯಪ್ಪ ವಿರುದ್ಧ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಆರೋಪ ಇರುವ ಹಿನ್ನೆಲೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೆಸಿ ಕಾರ್ಯಪ್ಪನನ್ನು ಮತ್ತೆ ವಿಚಾರಣೆ ನಡೆಸಿದ ಸಿಸಿಬಿ ಯಾರು ಈ ಕೆ.ಸಿ. ಕಾರ್ಯಪ್ಪ..?
ಕೆ.ಸಿ ಕಾರ್ಯಪ್ಪ ಕಿಂಗ್ಸ್ ಇಲೆವೆನ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನ ಆಟಗಾರ. ಈ ಹಿಂದೆ ಕೆಪಿಎಲ್ ನ ಬಿಜಾಪುರ ಬುಲ್ಸ್ ಪರ ಆಟವಾಡಿದ್ದ. 2015 ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ 3.5 ಲಕ್ಷ ಡಾಲರ್ ಗೆ ಸೇಲ್ ಆಗಿದ್ದ. 2016 ಹಾಗೂ 2017 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಂಗೆ ಸೇರಿದ ಕಾರ್ಯಪ್ಪ 2019 ರಲ್ಲಿ ಕೋಲ್ಕತ್ತಾ ಟೀಂನ ಶಿವಂ ಬದಲಿಗೆ ಕಾರ್ಯಪ್ಪನನ್ನ ಕಣಕ್ಕಿಳಿಸಲಾಗಿತ್ತು. ನಂತರ ಐಪಿಎಲ್ ಕೂಡ ಆಟವಾಡಿದ್ದ.
ಕೆಸಿ ಕಾರ್ಯಪ್ಪನನ್ನು ಮತ್ತೆ ವಿಚಾರಣೆ ನಡೆಸಿದ ಸಿಸಿಬಿ ಮ್ಯಾಚ್ ಫಿಕ್ಸಿಂಗ್ ವಿಚಾರವಾಗಿ ಸಿಸಿಬಿ ಇತ್ತೀಚೆಗೆ ಬಳ್ಳಾರಿ ಟಸ್ಕರ್ಸ್ ಆಟಗಾರನಾದ ಗೌತಮ್ ನನ್ನ ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ಕಾರ್ಯಪ್ಪ ಹೆಸರು ಕೇಳಿ ಬಂದಿದ್ದರಿಂದ ಸಿಸಿಬಿ ಅಧಿಕಾಗಿಳು ಕೆ. ಸಿ. ಕಾರ್ಯಪ್ಪನ ವಿಚಾರಣೆ ನಡೆಸುತ್ತಿದ್ದಾರೆ.