ಬೆಂಗಳೂರು:ಕರುನಾಡಿನ ಅನೇಕ ಪ್ರತಿಭಾನ್ವಿತ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪರಿಚಯಿಸಿದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 8ನೇ ಆವೃತ್ತಿಗೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.
ಅನೇಕ ಏಳುಬೀಳುಗಳ ನಡುವೆ ಯಶಸ್ವಿಯಾಗಿ ಕೆಎಸ್ಸಿಎ ಈ ಬಾರಿ ಟೂರ್ನಿಗೆ ಅದ್ಧೂರಿ ಆರಂಭ ನೀಡುವ ಉದ್ದೇಶವಿಟ್ಟುಕೊಂಡಿತ್ತು. ಆದರೆ ರಾಜ್ಯವ ವಿವಿಧ ಜಿಲ್ಲೆಗಳಲ್ಲಿನ ನೆರೆಯ ಹಿನ್ನೆಲೆಯಲ್ಲಿ ಕೆಲ ಬದಲಾವಣೆಗಳು ಆಗಿದ್ದು, ಸರಳವಾಗಿ ನಡೆಸಲು ನಿರ್ಧರಿಸಿದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕೆಪಿಎಲ್ ಶುಭಾರಂಭಗೊಳ್ಳಲಿದೆ.