ಕರ್ನಾಟಕ

karnataka

ETV Bharat / state

ಬಿಜೆಪಿಯೊಳಗೆ ಗೂಂಡಾಗಳಿದ್ದಾರೆ, ಇದೊಂದು ಜಂಗಲ್ ರಾಜ್ ಆಗಿದೆ: ರಾಮಲಿಂಗಾ ರೆಡ್ಡಿ

ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ. ಈಗಾಗಲೇ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮುಂಬರುವ ಚುನಾವಣಾಯಲ್ಲಿ ಠೇವಣಿ ಇಲ್ಲದಂಗೆ ಹೋಗ್ತಾರೆ‌ ಎಂದು ಕಾಂಗ್ರೆಸ್‌ ಮುಖಂಡ ರಾಮಲಿಂಗಾ ರೆಡ್ಡಿ ಹೇಳಿದರು.

ಅಶ್ವಥ್ ನಾರಾಯಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ವಾಗ್ದಾಳಿ
ಅಶ್ವಥ್ ನಾರಾಯಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ವಾಗ್ದಾಳಿ

By

Published : Jan 4, 2022, 5:25 PM IST

ಬೆಂಗಳೂರು:ಬಿಜೆಪಿಯವರು ಹೋರಾಟ ಮಾಡಲಿ ಬೇಡ ಎನ್ನಲ್ಲ. ಒಬ್ಬ ಮಂತ್ರಿ ಆಡುವ ಮಾತಾ ಇದು?, ಬಿಜೆಪಿಯೊಳಗೆ ಗೂಂಡಾಗಳಿದ್ದಾರೆ ಎಂದು ಸಚಿವ ಅಶ್ವತ್ಥ್‌ ನಾರಾಯಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಗರಂ ಆಗಿ ಪ್ರತಿಕ್ರಿಯಿಸಿದರು.


ಕೆಪಿಸಿಸಿ ಕಚೇರಿಯಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಮಾತನಾಡಿರುವ ವಿಡಿಯೋ ಪ್ರದರ್ಶನ ಮಾಡಿದ ರಾಮಲಿಂಗಾ ರೆಡ್ಡಿ, ಅಶ್ವತ್ಥ್‌ ನಾರಾಯಣ ಹಿಂದೆ ಡಿಸಿಎಂ, ಮಂತ್ರಿ ಆಗಿದ್ದರು. ಈಗಲೂ ಮಂತ್ರಿ ಆಗಿದ್ದಾರೆ‌. ಸಿಎಂ ಇರುವ ಕಾರ್ಯಕ್ರಮದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಗೊತ್ತಾಗಲ್ವಾ? ಹೋಗ್ರೋ, ಬನ್ರೋ ಎಂದು ಮಾತಾಡುತ್ತಾರೆ. ಸಿಎಂ ಬೊಮ್ಮಾಯಿ ಕೂಡಲೇ ಅಶ್ವತ್ಥ್‌ ನಾರಾಯಣ ಅವರನ್ನು ಕಿತ್ತು ಬಿಸಾಕಬೇಕಿತ್ತು. ಬಿಜೆಪಿಯೊಳಗೆ ಗೂಂಡಾಗಳಿದ್ದಾರೆ, ಇದೊಂದು ಜಂಗಲ್‌ರಾಜ್ ರೀತಿಯಲ್ಲಿ ಆಗಿದೆ ಎಂದರು.

ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ. ಈಗಾಗಲೇ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಠೇವಣಿ ಇಲ್ಲದಂಗೆ ಹೋಗ್ತಾರೆ‌ ಎಂದು ಹೇಳಿದರು.

ಅಶ್ವತ್ಥ್‌ ನಾರಾಯಣ್ ಏಕವಚನದಲ್ಲಿ ಮಾತನಾಡಿದ್ರು. ಏಕೆ ಅವರು ಮಾತನಾಡಬೇಕಾಗಿತ್ತು. ಹಾಗೆ ಮಾತನಾಡಿದರೆ ಯಾರಾದ್ರೂ ಸುಮ್ಮನೆ ಇರ್ತಾರಾ? ಪ್ರೊವೋಕ್ ಮಾಡಿದ್ದು ಯಾರು? ಅವರು ಸ್ಟ್ರೈಕ್ ಮಾಡಿದರೆ ನಾವು ಮಾಡ್ತೀವಿ. ಚುನಾವಣೆಯಲ್ಲಿ ಅವರಿಗೆ ಮಂಗಳಾರತಿ ಆಯ್ತಲ್ಲ. 2023ರ ಚುನಾವಣೆಯಲ್ಲಿ ಎಲ್ಲಾ ಗೊತ್ತಾಗುತ್ತೆ. ಹೋಗ್ರೋ ಬನ್ರೋ ಅನ್ನೋ ರೀತಿ ಯಾರಾದರು ಮಾತನಾಡ್ತಾರಾ? ನಾಚಿಕೆ ಆಗಬೇಕು ಎಂದರು.

ಕೊರೊನಾ ಸ್ಪೋಟವಾದರೆ ಕಾಂಗ್ರೆಸ್ ಹೊಣೆ ಹೊರಬೇಕು ಎಂಬ ಸುಧಾಕರ್ ಹೇಳಿಕೆ ವಿಚಾರ ಮಾತನಾಡಿ, ಸುಧಾಕರ್ ಮಂತ್ರಿ ಆದಾಗ ಎಲ್ಲಡೆ ಮೆರವಣಿಗೆ ಮಾಡಿದರು. ಆಗ ಎಲ್ಲಿಗೆ ಹೋಗಿತ್ತು ಬುದ್ದಿ?. ಇವರ ಪಕ್ಷದ ಮೆರವಣಿಗೆ ಮಾಡಿದರಲ್ಲಾ ಆಗ? ಇವರಿಗಿಂತ ಹೆಚ್ಚು ನಮಗೆ ಜವಾಬ್ದಾರಿ ಇದೆ ಎಂದರು.

For All Latest Updates

TAGGED:

ABOUT THE AUTHOR

...view details