ಬೆಂಗಳೂರು: ದೇಶದ ಜನ ಸಾಂಕ್ರಾಮಿಕ ರೋಗವನ್ನು ನೋಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ದಡಾರ, ಸಿಡುಬು, ಪೋಲಿಯೋದಂತಹ ಹಲವಾರು ಕಾಯಿಲೆಗಳು ಬಂದಿವೆ. ಪರಿಸ್ಥಿತಿಯನ್ನು ಹಿಂದಿನ ಎಲ್ಲ ಸರ್ಕಾರಗಳೂ ಜವಾಬ್ದಾರಿಯುತವಾಗಿ ನಿರ್ವಹಿಸಿವೆ. ಆದರೆ ಅಧಿಕಾರದಲ್ಲಿ ಬೇರೆ ಪಕ್ಷ ಇದ್ದಿದ್ದರೆ ಕೋವಿಡ್ ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ ಎನ್ನುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ತಮ್ಮ ಕೋಳಿ ಕೂಗಿದರೆ ಬೆಳಗಾಗುವುದು ಎಂಬ ಭ್ರಮೆ ಇದೆ. ಪಾಪ..." ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಒರೆಸಿತು: ಕಟೀಲ್‌ಗೆ ಈಶ್ವರ್ ಖಂಡ್ರೆ ಟಾಂಗ್ - ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸುದ್ದಿ
ಪಿ.ಎಂ ಕೇರ್ಸ್‌ಗೆ ಬಂದ ಹಣವೆಷ್ಟು ಎಂಬ ಲೆಕ್ಕ ಕೊಟ್ಟು, ವಿವೇಚನೆಯಿಂದ ಖರ್ಚು ಮಾಡಿದ್ದರೆ ಕೊರೊನಾ ಖಂಡಿತಾ ನಿಯಂತ್ರಿಸಬಹುದಾಗಿತ್ತು. ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಒರೆಸಿತು ಎಂಬುದು ಕನ್ನಡದ ಗಾದೆ. ರಾಜ್ಯಾಧ್ಯಕ್ಷರು ತಮ್ಮ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಆರೋಪ ಮಾಡುವುದು ಮೂರ್ಖತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ- ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವ್ಯಂಗ್ಯ
ಈಶ್ವರ್ ಖಂಡ್ರೆ ವ್ಯಂಗ್ಯ
"ಪಿ.ಎಂ ಕೇರ್ಸ್‌ಗೆ ಬಂದ ಹಣವೆಷ್ಟು ಎಂಬ ಲೆಕ್ಕ ಕೊಟ್ಟು, ವಿವೇಚನೆಯಿಂದ ಖರ್ಚು ಮಾಡಿದ್ದರೆ ಕೊರೊನಾ ಖಂಡಿತಾ ನಿಯಂತ್ರಿಸಬಹುದಾಗಿತ್ತು. ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಒರೆಸಿತು ಎಂಬುದು ಕನ್ನಡದ ಗಾದೆ. ರಾಜ್ಯಾಧ್ಯಕ್ಷರು ತಮ್ಮ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಆರೋಪ ಮಾಡುವುದು ಮೂರ್ಖತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ." ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ:ಮಾನವೀಯತೆ ಮೆರೆದ ವಿ. ಸೋಮಣ್ಣ.. ಕೊಡಗು ಜಿಲ್ಲಾ ಕೋವಿಡ್ ಸ್ಥಿತಿ ಗತಿ ಕುರಿತು ಮಾಹಿತಿ ನೀಡಿದ ಸಚಿವರು..