ಬೆಂಗಳೂರು:ಅಮೆರಿಕದ ಹ್ಯೂಸ್ಟನ್ನಲ್ಲಿ ಆಯೋಜಿಸಿದ್ದ ಹೌಡಿ ಮೋಡಿ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡಿ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ಹ್ಯೂಸ್ಟನ್ ನೆರೆ ಸಂತ್ರಸ್ತರಿಗಾಗಿ ಪ್ರಾರ್ಥಿಸಲು ಮೋದಿಯವರಿಗೆ ಸಮಯವಿದೆ: ಕೆಪಿಸಿಸಿ ಕಿಡಿ - ಕರ್ನಾಟಕ
ಅಮೆರಿಕದ ಹ್ಯೂಸ್ಟನ್ನಲ್ಲಿ ಆಯೋಜಿಸಿದ್ದ ಹೌಡಿ ಮೋಡಿ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡಿ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ರಾಜ್ಯ ಕಾಂಗ್ರೆಸ್ ಮಾಡಿರುವ ಟ್ವೀಟ್ನಲ್ಲಿ, ಹೌಡಿ ಮೋದಿ ಕಾರ್ಯಕ್ರಮದಲ್ಲಿ ಯುಎಸ್ ಪ್ರತಿನಿಧಿ ಸ್ಟೆನಿ ಹೋಯರ್ ಜೊತೆ ಹ್ಯೂಸ್ಟನ್‌ನ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಪ್ರಾರ್ಥಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಯವಿದೆ. ಆದರೆ ಪ್ರಧಾನಮಂತ್ರಿಗಳಿಗೆ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರನ್ನು ಭೇಟಿ ಮಾಡಲು ಅಥವಾ ಪರಿಹಾರ ಘೋಷಿಸಲು ಸಮಯವಿಲ್ಲ. ಅವರು ಹ್ಯೂಸ್ಟನ್‌ನ ಪ್ರವಾಹ ಪೀಡಿತರ ಪ್ರಾರ್ಥನೆಗೆ ಸಾಕ್ಷಿಯಾಗಿದ್ದಾರೆ ಎಂದು ಲೇವಡಿ ಮಾಡಿದೆ.
ಕರ್ನಾಟಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಭೇಟಿಗೆ ಅವಕಾಶ ನೀಡದ ಪ್ರಧಾನಿ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಲೇ ಬಂದಿದೆ. ರಾಜ್ಯದ ಜನರ ಸಮಸ್ಯೆಯನ್ನು ಹೇಳಿಕೊಳ್ಳಲು ಅರ್ಧ ಗಂಟೆ ಕಾಲಾವಕಾಶವನ್ನು ಪ್ರಧಾನಿ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕರು ಬೇಸರ ತೋಡಿಕೊಂಡಿದ್ದಾರೆ. ಈ ನಡುವೆ ಇದೀಗ ಹೌಡಿ ಮೋದಿ ಕಾರ್ಯಕ್ರಮ ಕುರಿತು ಕೂಡ ಲೇವಡಿ ಮಾಡುವ ಮೂಲಕ ಕಾಂಗ್ರೆಸ್ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.