ಕರ್ನಾಟಕ

karnataka

ETV Bharat / state

ಕೆಪಿಸಿಸಿ ವಕ್ತಾರ ಜಾಫರ್‌ ಮೊಹಿಯುದ್ದೀನ್‌ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ - ಈಟಿವಿ ಭಾರತ ಕನ್ನಡ

ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಕೆಪಿಸಿಸಿ ವಕ್ತಾರ ಜಾಫರ್‌ ಮೊಹಿಯುದ್ದೀನ್‌ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

kpcc-spokesperson-jaffer-mohiuddin-joined-aam-aadmi-party
ಕೆಪಿಸಿಸಿ ವಕ್ತಾರ ಜಾಫೆರ್‌ ಮೊಹಿಯುದ್ದೀನ್‌ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

By

Published : Nov 11, 2022, 3:13 PM IST

ಬೆಂಗಳೂರು :ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಕೆಪಿಸಿಸಿ ವಕ್ತಾರ ಜಾಫರ್‌ ಮೊಹಿಯುದ್ದೀನ್‌ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಯಾದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, ರಾಯಚೂರು ಮೂಲದವರಾದ ಜಾಫೆರ್‌ ಮೊಹಿಯುದ್ದೀನ್‌ ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿದ್ದಾಗಲೇ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಇವರು ಭಾರತೀಯ ವಾಯುಪಡೆಯಲ್ಲಿ ಡೆಪ್ಯುಟಿ ಆರ್ಕಿಟೆಕ್ಟ್‌ ಆಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1997ರಲ್ಲಿ ರಾಯಚೂರಿನಲ್ಲಿ ಜಾಫರ್‌ ಅಸೋಸಿಯೇಟ್ಸ್‌ ಎಂಬ ಸ್ವಂತ ಸಂಸ್ಥೆ ಕಟ್ಟಿದ್ದಾರೆ. ಕತ್ಪುಟ್ಲಿಯಾನ್‌ ಥಿಯೇಟರ್‌ ಗ್ರೂಪ್‌ ಎಂಬ ಎನ್‌ಜಿಒ ಅಧ್ಯಕ್ಷರಾಗಿ ರಂಗಭೂಮಿ, ಕಲೆ, ಸಂಗೀತವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಫುವಾಕ್ ಎಂಬ ಎನ್‌ಜಿಒ ಅಧ್ಯಕ್ಷರಾಗಿ ಉರ್ದು ಲೇಖಕರು ಹಾಗೂ ಕಲಾವಿದರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.

ಜಾಫೆರ್‌ರವರು ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ದೃಶ್ಯಮಾಧ್ಯಮಗಳ ಹಲವು ಚರ್ಚೆಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಮಾನವ ಹಕ್ಕುಗಳು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕಂಡು ಬಂದಾಗಲೆಲ್ಲ ಪ್ರತಿಭಟಿಸುವ ಮನೋಭಾವ ಇವರದ್ದು. 2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

2021ರಲ್ಲಿ ಆಮ್‌ ಆದ್ಮಿ ಪಾರ್ಟಿ ಸೇರಿ 2014ರ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಕಾರಣಾಂತರದಿಂದ 2015ರ ನಂತರ ಆಮ್‌ ಆದ್ಮಿ ಪಾರ್ಟಿಯಿಂದ ದೂರವಾಗಿ, 2016ರಲ್ಲಿ ಕಾಂಗ್ರೆಸ್‌ ಸೇರಿದ್ದರು. 2019ರ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಈಗ ಇವರು ಮತ್ತೆ ಎಎಪಿಗೆ ವಾಪಸ್​ ಆಗುತ್ತಿರುವುದು ನಮಗೆಲ್ಲ ಸಂತಸ ಉಂಟುಮಾಡಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಭ್ರಷ್ಟ ಬಿಜೆಪಿಯನ್ನು ಮೂಲೆಗುಂಪು ಮಾಡುವ ಸಾಮರ್ಥ್ಯ ಆಪ್​​ಗಿದೆ: ಬಳಿಕ ಮಾತನಾಡಿದ ಜಾಫೆರ್‌ ಮೊಹಿಯುದ್ದೀನ್‌, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರದ ಸುಧಾರಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಗಿರುವ ಬದ್ಧತೆ ಪ್ರಶಂಸನೀಯ. ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವನ್ನು ಆಮ್‌ ಆದ್ಮಿ ಪಾರ್ಟಿ ಮಾತ್ರ ತೆಗೆದುಕೊಳ್ಳಬಹುದು.

ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಭ್ರಷ್ಟ ಬಿಜೆಪಿಯನ್ನು ಮೂಲೆಗುಂಪು ಮಾಡುವ ಸಾಮರ್ಥ್ಯ ಎಎಪಿಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹಾಗೂ ಇತರೆ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ :ಪ್ರತಿ ತಿಂಗಳು ಮೋದಿ ಬರಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ ಚಳವಳಿ..

For All Latest Updates

ABOUT THE AUTHOR

...view details