ಬೆಂಗಳೂರು: ಬುದ್ಧ ಪೂರ್ಣಿಮೆ ಅಂಗವಾಗಿ ಗಾಂಧಿನಗರದ ಬೌದ್ಧ ವಿಹಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುರುವಾರ ಭೇಟಿ ನೀಡಿ ಬುದ್ಧನ ಪ್ರತಿಮೆಗೆ ನಮನ ಸಲ್ಲಿಸಿದರು.
ಬುದ್ಧ ಪೂರ್ಣಿಮೆ ಪ್ರಯುಕ್ತ ಗಾಂಧಿನಗರದ ಬೌದ್ಧ ವಿಹಾರಕ್ಕೆ ಡಿಕೆಶಿ ಭೇಟಿ - DK Sivakumar visited the Buddha Vihara in Gandhinagar
ಗಾಂಧಿನಗರದ ಬೌದ್ಧ ವಿಹಾರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುದ್ಧನ ಪ್ರತಿಮೆಗೆ ನಮನ ಸಲ್ಲಿಸಿದರು.
ಬೌದ್ಧ ವಿಹಾರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಬಳಿಕ ಬೌದ್ಧ ಗುರುಗಳಿಂದ ಆಶೀರ್ವಾದ ಪಡೆದ ಅವರು, ಸ್ವಲ್ಪ ಹೊತ್ತು ಬುದ್ಧನ ಪ್ರತಿಮೆ ಎದುರು ಕುಳಿತು ಧ್ಯಾನ ಮಾಡಿದರು. ಇದಾದ ಬಳಿಕ ಹನುಮಂತನಗರಕ್ಕೆ ತೆರಳಿ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸ್ಥಳೀಯ ನಾಯಕ ಬಲರಾಮ್ ಈ ವೇಳೆ ಉಪಸ್ಥಿತರಿದ್ದರು.