ಬೆಂಗಳೂರು: ಕೋವಿಡ್ 19 ರಾಜ್ಯಮಟ್ಟದ ಕಾಂಗ್ರೆಸ್ ಮೇಲ್ವಿಚಾರಣಾ ಸಮಿತಿ ವರದಿಯನ್ನು ಸಮಿತಿ ಅಧ್ಯಕ್ಷ, ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯನವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸದಾಶಿವನಗರ ನಿವಾಸದಲ್ಲಿ ಭಾನುವಾರ ಸಲ್ಲಿಸಿದರು.
ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಸಮಿತಿ ಸಹ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ, ಸಮಿತಿ ಸದಸ್ಯರಾದ ಮಾಜಿ ಶಾಸಕ ಲಕ್ಷ್ಮೀನಾರಾಯಣ, ಸೂರಜ್ ಹೆಗ್ಡೆ, ಡಾ. ಮಧುಸೂದನ್, ರಘು ದೊಡ್ಡೇರಿ ಮತ್ತಿತರರು ಹಾಜರಿದ್ದರು. ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್, ಕೊವೀಡ್ ಪ್ರಾರಂಭದ ಸಂದರ್ಭದಲ್ಲಿ ನಾನು ಪಕ್ಷದ ಜವಾಬ್ದಾರಿ ಹೊತ್ತುಕೊಂಡೆ. ಮೊದಲನೇ ಅಲೆಯಲ್ಲಿ ನಾವು ತೆಗೆದುಕೊಂಡ ನಿರ್ಣಯಗಳು ಜನರಿಗೆ ತುಂಬಾ ಸಹಾಯವಾದವು.
ವಲಸಿಗರಿಗೆ ಧೈರ್ಯ ತುಂಬಿ, ರೈತರಿಗೆ ನಾವು ನೆರವು ನೀಡಿದ್ವಿ. ಸರ್ಕಾರದ ಮೇಲೆ ಒತ್ತಡ ತಂದು, ಸೂಕ್ತ ಪರಿಹಾರ ಮಾಡಿಸಿದ್ದೇವೆ. ಸರ್ಕಾರ ನಮ್ಮ ಒತ್ತಡಕ್ಕೆ ಮಣಿದು, ವಲಸಿಗರಿಗೆ ಉಚಿತ ಬಸ್ಸು ನೀಡಿದ್ದರು. ಇದರಿಂದ ಏನೋ ನಮಗೆ ಮತ ಸಿಗುತ್ತೆ ಅಂತಾ ಅಲ್ಲ. ಪ್ರತಿಪಕ್ಷವಾಗಿ ನಮ್ಮ ಕೆಲಸ ವನ್ನು ನಾವು ಸಮರ್ಥವಾಗಿ ಮಾಡಿದ್ದೇವೆ ಎಂದರು.
ಆಡಳಿತದ ಪಕ್ಷದ ಒಬ್ಬ ಮಂತ್ರಿ, ಒಬ್ಬ ಶಾಸಕ, ಒಬ್ಬ ಕಾರ್ಯಕರ್ತ ಇಂತಹ ಕೆಲಸ ಮಾಡಿದ್ದೀರಾ? ರಾಜ್ಯದ ಕೊವೀಡ್ ಸ್ಥಿತಿಗತಿ ಬಗ್ಗೆ ನಮ್ಮ ತಂಡ ಸಮರ್ಥವಾಗಿ ಅಧ್ಯಯನ ಮಾಡಿ, ವರದಿ ನೀಡಿದೆ. ಕೊವೀಡ್ ನಿರ್ವಹಣೆ ಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದರೆ ನಾವು ಕೊವೀಡ್ ನಿರ್ವಹಣೆ ಸಮರ್ಥವಾಗಿ ಮಾಡಿದ್ದೇವೆ.
ಎರಡುವರೆ ಕೋಟಿ ಜನರಿಗೆ ನಾವು ಸಹಾಯ ಮಾಡಿದ್ದೇವೆ. ರಾಜ್ಯದಲ್ಲಿ ಯಾರು ಸತ್ತಿಲ್ಲ ಅಂತಾ ಕೇಂದ್ರದ ಸಚಿವರು ಉತ್ತರ ಕೊಡ್ತಾರೆ. ಆದರೆ ಇಲ್ಲಿ ಸತ್ತಿದ್ದ ಕುಟುಂಬಕ್ಕೆ ಮುಖ್ಯಮಂತ್ರಿ ಗಳು ಯಾಕೆ ಪರಿಹಾರ ಕೊಟ್ರಿ..? ನಮಗೆ ಅಧಿಕಾರ ಆಗಲಿ, ಯಾರು ಸಿಎಂ ಆಗಬೇಕು ಅಂತಾ ಅಲ್ಲ ಎಂದರು.
ರಾಜ್ಯದ ಹಲವೆಡೆ ಮಳೆ ಹಿನ್ನೆಲೆ ಇವತ್ತು ಸಿಎಂ ಬೆಳಗಾವಿ ಗೆ ಹೋಗಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಮಳೆ ಬರ್ತಿದೆ. ಕಳೆದ ವರ್ಷ ಮಳೆಯಿಂದ ಬಿದ್ದ ಮನೆಗಳನ್ನು ಯಾಕೆ ಮನೆ ಕಟ್ಟಿಕೊಟ್ಟಿಲ್ಲ..? ಸರ್ಕಾರದದಿಂದ ಯಾಕ್ರಿ ಪರಿಹಾರ ಕೊಟ್ಟಿಲ್ಲ? ಪರಿಹಾರ ನೀಡಿಲ್ಲ ಅಂದರೆ ಸರ್ಕಾರ ಯಾಕ್ರಿ ಬೇಕು..? ಬಿಜೆಪಿಗೆ ಜನರ ಸೇವೆ ಮಾಡೋಕೆ ಆಗೋಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಸರ್ಕಾರ ಸಂಪೂರ್ಣ ವಾಗಿ ವಿಫಲವಾಗಿದೆ.
ಇದನ್ನೂ ಓದಿ : ಬಿಎಸ್‌ವೈ ಸರ್ಕಾರಕ್ಕೆ 2 ವರ್ಷ: ಆಂತರಿಕ ಬೇಗುದಿ ಜೊತೆ ಪ್ರತಿಪಕ್ಷಗಳ ಹೋರಾಟದ ಕಿರಿಕಿರಿ
ನಡೀರಿ ಚುನಾವಣೆ ಗೆ ಹೋಗೋಣ. ಜನರಿಗೆ ಹೊಸ ಸರ್ಕಾರ ಕೊಡೋಣ. ಹಿಂದೆ ಪ್ರಧಾನಿಗಳು ಬೇರೆ ರಾಜ್ಯಕ್ಕೆ ಹೋಗಿದ್ರು. ಯಾಕೆ ಅವ್ರು ಹಿಂದೆ ನಮ್ಮ ರಾಜ್ಯಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ರೀತಿ ಮಾಡ್ತಿದೆ. ಗುಜರಾತ್ ಗೆ ಎಷ್ಟು ವ್ಯಾಕ್ಸಿನ್ ಕೊಟ್ಟಿದ್ದಾರೆ. ಕರ್ನಾಟಕ್ಕೆ ಎಷ್ಟು ವ್ಯಾಕ್ಸಿನ್ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅಧಿಕಾರ ತೆಗೆದುಕೊಂಡ ದಿನದಿಂದಲೂ ರಾಜಕೀಯ ಅನಿಶ್ಚಿತತೆ ಇದೆ. ಇದು ಅವರ ಆಡಳಿತ, ಇದು ಜನರಿಗೆ ಕೊಟ್ಟಿರುವ ಕೊಡುಗೆ. ಇವತ್ತು ಸಿಎಂ ಬಿಎಸ್‌ವೈ ಗೆ ಹೈಕಮಾಂಡ್ ನಿಂದ ಸಂದೇಶ ಬರುವ ವಿಚಾರ ಮಾತನಾಡಿ, ಇವತ್ತು ಗವರ್ನರ್ ಊರಲ್ಲಿ ಇಲ್ಲ. ಗವರ್ನರ್ ಬಂದ ನಂತರ ನೀವು ಅವರು ಮಾತಾಡಿ ಎಂದ ಡಿಕೆಶಿ, ಪರೋಕ್ಷವಾಗಿ ಇವತ್ತು ಸಿಎಂ ಬದಲಾವಣೆ ಆಗೋಲ್ಲ ಎಂದು ನುಡಿದರು.