ಕರ್ನಾಟಕ

karnataka

ETV Bharat / state

ಪದಗ್ರಹಣ ಸಮಾರಂಭದಲ್ಲಿ ಮಾಸ್ಕ್ ಧರಿಸದೆ ಓಡಾಡಿದ ಡಿಕೆ ಶಿವಕುಮಾರ್​ - ಬೆಂಗಳೂರು ಸುದ್ದಿ

250ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್​ ಮಾಸ್ಕ್​ ಹಾಕದೇ ಓಡಾಡಿದ್ದು, ತಮಗೆ ಕೊರೊನಾ ಆತಂಕವಿಲ್ಲ ಎನ್ನುವುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

KPCC President DK Shivakumar without mask in Event
ಪದಗ್ರಹಣ ಸಮಾರಂಭದಲ್ಲಿ ಮಾಸ್ಕ್ ಇಲ್ಲದೇ ಓಡಾಡಿದ ಟ್ರಬಲ್ ಶೂಟರ್

By

Published : Jul 2, 2020, 11:41 PM IST

ಬೆಂಗಳೂರು:ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮಗೆ ಕೊರೊನಾ ಆತಂಕವಿಲ್ಲ ಎಂಬುವುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಪದಗ್ರಹಣ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೇ ಓಡಾಡಿದ ಡಿಕೆಶಿ

250ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್​ ಅವರು ಮಾಸ್ಕ್​ ಧರಿಸದೇ ಓಡಾಡಿದ್ದಾರೆ. ಸಮಾರಂಭದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆಯಲ್ಲೂ ನೂರಾರು ಕಾರ್ಯಕರ್ತರ ನಡುವೆ ಮಾಸ್ಕ್​ ಹಾಕದೇ ನಿಂತಿದ್ದರು. ಪದಗ್ರಹಣ ಕಾರ್ಯಕ್ರಮಕ್ಕೆ 150 ಕಾರ್ಯಕರ್ತರುಪಾಲ್ಗೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ, 250ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರು ಮೂರು ಮಹಡಿಯ ಕಟ್ಟಡದ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು, ಈ ವೇಳೆ ಸಾಮಾಜಿಕ ಅಂತರ ಮಾಯವಾಗಿತ್ತು.

ಕೆಪಿಸಿಸಿಯ ಹಳೆಯ ಕಚೇರಿ ಹಾಗೂ ಅದರ ಪಕ್ಕದ ಕಟ್ಟಡದಲ್ಲೂ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಯೂ ಸಾಮಾಜಿಕ ಅಂತರ ಇರಲಿಲ್ಲ. ಹವಾ ನಿಯಂತ್ರಕವನ್ನ ನಿರಂತರವಾಗಿ ಬಳಸಲಾಗಿತ್ತು.

ಪೊಲೀಸ್ ಇಲಾಖೆ ಬೆಳಗ್ಗೆ 10.30 ರಿಂದ 1ಗಂಟೆಯವರೆಗೆ ಕಾರ್ಯಕ್ರಮ ನಡೆಸಲು ಪರವಾನಗಿ ನೀಡಿತ್ತು. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ಸಮಯ ನಿಗದಿ ಪಡಿಸಲಾಗಿತ್ತು. ಆದರೆ, ಸಕಾಲಕ್ಕೆ ಆರಂಭವಾದ ಕಾರ್ಯಕ್ರಮ ಮುಕ್ತಾಯ ಆದಾಗ ಮಧ್ಯಾಹ್ನ 3 ಗಂಟೆ ಆಗಿತ್ತು.

ABOUT THE AUTHOR

...view details