ಕರ್ನಾಟಕ

karnataka

ETV Bharat / state

ನೂತನ ದಂಪತಿ ನಿಖಿಲ್‌-ರೇವತಿಗೆ ಶುಭ ಕೋರಿದ ಡಿ.ಕೆ.ಶಿವಕುಮಾರ್​​ - Kpcc president dk shivakumar

ಕೊರೊನಾ ನಿರ್ಬಂಧವಿದ್ದ ಕಾರಣ ನಿಖಿಲ್-ರೇವತಿ ವಿವಾಹ ಕಾರ್ಯಕ್ರಮ ಸರಳವಾಗಿ ನಡೆದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ನಾಯಕರು ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ಟೀಟ್ ಮೂಲಕ ನೂತನ ದಂಪತಿಗೆ ಶುಭ ಕೋರಿದ್ದಾರೆ.

Kpcc president dk shivakumar
ನಿಖಿಲ್‌-ರೇವತಿ ದಂಪತಿ ಅಭಿನಂದಿಸಿ ಡಿ.ಕೆ.ಶಿವಕುಮಾರ್ ಟ್ವೀಟ್

By

Published : Apr 19, 2020, 7:48 PM IST

ಬೆಂಗಳೂರು:ಮೊನ್ನೆಯಷ್ಟೇ ವಿವಾಹವಾದ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಭ ಕೋರಿದ್ದಾರೆ.

ನಿಖಿಲ್‌-ರೇವತಿ ದಂಪತಿಗೆ ಶುಭ ಕೋರಿ ಡಿ.ಕೆ.ಶಿವಕುಮಾರ್ ಟ್ವೀಟ್

ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗೆ ತುಂಬು ಹೃದಯದ ಶುಭಾಶಯಗಳು. ಲಕ್ಷಾಂತರ ಮಂದಿ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿರಿಸಬೇಕೆಂದಿದ್ದವರು ಸರಳ ರೀತಿಯಲ್ಲಿ ವಿವಾಹವಾದ ವೈಖರಿ ಸಮಾಜಕ್ಕೆ ಮಾದರಿ. ಇದಕ್ಕೆ ಮೇಲ್ಪಂಕ್ತಿ ಹಾಕಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಲಾಕ್​ಡೌನ್‌ ಹಿನ್ನೆಲೆಯಲ್ಲಿ ರಾಮನಗರದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕೆಲವೇ ಮಂದಿ ಕುಟುಂಬ ವರ್ಗದವರ ಸಮ್ಮುಖದಲ್ಲಿ ಏ. 17ರಂದು ವಿವಾಹ ಸಮಾರಂಭ ನೆರವೇರಿತ್ತು. ಕೊರೊನಾ ನಿರ್ಬಂಧ ಸಲುವಾಗಿ ಸರಳವಾಗಿ ನಡೆದ ಕಾರ್ಯಕ್ರಮದಿಂದಾಗಿ ರಾಜಕೀಯ ನಾಯಕರು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ABOUT THE AUTHOR

...view details