ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತವಾಗಿ ಸಂಘಟಿಸಲು ಹೊರಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತವಾಗಿ ಸಂಘಟಿಸಲು ಹೊರಟಿದ್ದೇವೆ: ಡಿ.ಕೆ. ಶಿವಕುಮಾರ್ - ಡಿ.ಕೆ. ಶಿವಕುಮಾರ್ ಟ್ವೀಟ್
ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತವಾಗಿ ಸಂಘಟಿಸಲು ಹೊರಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಈ ಬಗ್ಗೆ ಟ್ವೀಟ್ ಮಾಡಿದ ಅವರು ಯುವ ಜನತೆಯನ್ನು ಸೆಳೆಯಲು ಪಕ್ಷವನ್ನು ಕೇಡರ್ ಮಾದರಿಯಲ್ಲಿ ಮರು ಸಂಘಟಿಸುವುದಾಗಿ ತಿಳಿಸಿದ್ದಾರೆ. ಈಗ ಪ್ರತಿ ಕುಟುಂಬದಲ್ಲಿ ಯುವಕರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಯುವ ವಯಸ್ಸಿನಲ್ಲೇ ನಾವು ಅವರನ್ನು ಪಕ್ಷದ ಸಿದ್ಧಾಂತದತ್ತ ಸೆಳೆಯದಿದ್ದರೆ ಮತ್ತೆ ಅವರನ್ನು ಸೆಳೆಯಲು ಸಾಧ್ಯವಿಲ್ಲ. ಹೀಗಾಗಿ ಪಕ್ಷವನ್ನು ಕೇಡರ್ ಆಧಾರಿತವಾಗಿ ಸಂಘಟಿಸಲು ಹೊರಟಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.