ಕರ್ನಾಟಕ

karnataka

ETV Bharat / state

ವೆಂಟಿಲೇಟರ್​​ಗೆ ತಮಿಳುನಾಡಿನಲ್ಲಿ ₹4.78 ಲಕ್ಷ, ರಾಜ್ಯದಲ್ಲಿ ₹18 ಲಕ್ಷ ನೀಡಿ ಖರೀದಿ : ಡಿಕೆಶಿ

ವೆಂಟಿಲೇಟರ್,ಪಿಪಿಇ ಕಿಟ್, ಬೆಡ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಇಂತಹ ಸಂದರ್ಭದಲ್ಲೂ ಸರ್ಕಾರ ಲೂಟಿ ಹೊಡೆಯುತ್ತಿದೆ. ಉತ್ತರ ಕೊಡಿ ಸಿಎಂ, ಉತ್ತರ ಕೊಡಿ ಬಿಜೆಪಿ ನಾಯಕರೇ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ..

By

Published : Jul 18, 2020, 2:37 PM IST

KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು :ವೆಂಟಿಲೇಟರ್​ ಖರೀದಿಯಲ್ಲಿ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಅವರು, ವೆಂಟಿಲೇಟರ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ತಮಿಳುನಾಡು ಸರ್ಕಾರ ₹4.78 ಲಕ್ಷಕ್ಕೆ ಖರೀದಿಸಿದೆ. ಅದೇ ವೆಂಟಿಲೇಟರ್​​ಗೆ ರಾಜ್ಯ ಸರ್ಕಾರ ದುಪ್ಪಟ್ಟು ನೀಡಿದೆ. ಒಂದು ವೆಂಟಿಲೇಟರ್​​ಗೆ ₹18.20 ಲಕ್ಷ ನೀಡಿದೆ. ಮೂರು ಪಟ್ಟು ಹೆಚ್ಚಿನ ಹಣ ನೀಡಿ ಖರೀದಿಸಿದೆ. ವೆಂಟಿಲೇಟರ್ ಸಿಗದೆ ಸೋಂಕಿತರು ಸಾಯುತ್ತಿದ್ದಾರೆ. ಬಿಜೆಪಿ ಸಚಿವರು ಎಲ್ಲದರಲ್ಲೂ ಲೂಟಿ ಮಾಡುತ್ತಿದ್ದಾರೆ ಎಂದಿದ್ದಾರೆ.

ವೆಂಟಿಲೇಟರ್,ಪಿಪಿಇ ಕಿಟ್, ಬೆಡ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಇಂತಹ ಸಂದರ್ಭದಲ್ಲೂ ಸರ್ಕಾರ ಲೂಟಿ ಹೊಡೆಯುತ್ತಿದೆ. ಉತ್ತರ ಕೊಡಿ ಸಿಎಂ, ಉತ್ತರ ಕೊಡಿ ಬಿಜೆಪಿ ನಾಯಕರೇ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈಗಾಗಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಳೆದ ಒಂದು ವಾರದಿಂದ ಉತ್ತರ ಕೊಡಿ ಅಭಿಯಾನ ಆರಂಭಿಸಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷರ ಸೇರ್ಪಡೆಯೂ ಆಗಿದೆ. ಕೋವಿಡ್ ವಿಚಾರದಲ್ಲಿ ಸರ್ಕಾರ ಹಾಗೂ ಸಚಿವರು ಕೈಗೊಂಡ ಪ್ರತಿ ನಿರ್ಧಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದೆ. ಇದಕ್ಕೆ ಉತ್ತರಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ.

ABOUT THE AUTHOR

...view details