ಬೆಂಗಳೂರು: ಕೆಲವರು ಪಕ್ಷಕ್ಕೆ ಬಂದು ಸುಮ್ಮನೆ ಕೂರ್ತಾರೆ, ಒಂದು ಬಾವುಟ ಕಟ್ಟಲ್ಲ, ನಾಲ್ಕು ವೋಟ್ ಹಾಕಿಸಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಸಿಎಂ ಡಿ.ದೇವರಾಜ್ ಅರಸು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿನ ನಿಷ್ಕ್ರಿಯ ನಾಯಕರ ಬಗ್ಗೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವರು ಪಕ್ಷಕ್ಕೆ ಬಂದು ಸುಮ್ಮನೆ ಕೂರ್ತಾರೆ. ಒಂದು ಬಾವುಟ ಕಟ್ಟಲ್ಲ, ನಾಲ್ಕು ವೋಟ್ ಹಾಕಿಸಲ್ಲ. ಕೆಲಸ ಮಾಡೋರ ಬಗ್ಗೆ ಕ್ಯಾರೆಕ್ಟರ್ ಸರಿಯಿಲ್ಲ ಅಂತಾರೆ. ಚಾಕು, ಚೂರಿ ಎಂದು ದೂರು ಹೇಳುತ್ತಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜೀವ್ ಗಾಂಧಿ ಯೂತ್ ಕಾಂಗ್ರೆಸ್ ಸದಸ್ಯರನ್ನ ಕೊರಿಯಾಗೆ ಕಳಿಸಿದರು. ನನ್ನ ಹೆಸರು ನೋಡಿ ಕೆಲ ಸಂಸದರು ದೂರು ಹೇಳಿದ್ದರು. ಅವನನ್ನು ಕಳಿಸಿದರೆ ಪಕ್ಷದ ಮರ್ಯಾದೆ ಹೋಗುತ್ತೆ ಎಂದು ಹೇಳಿದ್ದರು. ಆ ಮೇಲೆ ನನ್ನ ಬಗ್ಗೆ ಮಾಹಿತಿ ಪಡೆಯುವಂತೆ ಅವರ ಆಪ್ತ ಕಾರ್ಯದರ್ಶಿಗೆ ಸೂಚನೆ ಕೊಟ್ಟರು. ಅವರು ರಿಪೋರ್ಟ್ ಕೊಟ್ಟ ಬಳಿಕ ಎಂಟು ಜನ ಸಂಸದರಿಗೆ ರಾಜೀವ್ ಗಾಂಧಿ ತಿಳಿ ಹೇಳಿದರು. ಯಾರನ್ನೂ ಕಾಂಟ್ರವರ್ಸಿ ಎಂದು ತಿಳಿದುಕೊಳ್ಳಬೇಡಿ. ಅಂತವರೇ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದನ್ನ ಸ್ಮರಿಸಿದರು.