ಕರ್ನಾಟಕ

karnataka

ETV Bharat / state

ಬಿಜೆಪಿಯವರಿಗೆ ಸರ್ಕಾರ ನಡೆಸಲು ಆಗಲ್ಲ ಎಂದರೆ ಬಿಟ್ಟು ಹೋಗಲಿ: ಡಿಕೆಶಿ ಕಿಡಿ - ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ

1750 ಟನ್ ಆಕ್ಸಿಜನ್ ರಾಜ್ಯಕ್ಕೆ ಬೇಕು ಅಂತ ಕೇಂದ್ರಕ್ಕೆ ರಾಜ್ಯ ಸರ್ಕಾರ ಡಿಮ್ಯಾಂಡ್ ಮಾಡಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 850 ಟನ್ ಮಾತ್ರ ನೀಡಿದೆ. ಎಲ್ಲಾ ಆಕ್ಸಿಜನ್ ಕೇಂದ್ರ ಸರ್ಕಾರ ಟೇಕ್ ಓವರ್ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ
ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ

By

Published : May 4, 2021, 10:44 AM IST

ಬೆಂಗಳೂರು: ಬಿಜೆಪಿಯವರಿಗೆ ಸರ್ಕಾರ ನಡೆಸಲು ಆಗಲ್ಲ, ಎಲ್ಲರೂ ಬಿಟ್ಟು ಹೋಗಲಿ. ಬೇಕಿದ್ದರೆ ರಾಜ್ಯಪಾಲರ ಆಳ್ವಿಕೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಕೋವಿಡ್ ರೋಗಿಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ತೆರಳುವ ಮುನ್ನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಬ್ಬ ಮಂತ್ರಿಯಾದರೂ ಸತ್ತವರ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದಾರಾ? 25 ಜನ ಮಂತ್ರಿಗಳು ಜಿಲ್ಲೆಗಳಿಗೆ ಹೋಗಿದ್ದಾರಾ? ಸರ್ಕಾರದ ಮೇಲೆ ನಂಬಿಕೆ ಇಲ್ಲ ಅಂತಾನೇ ನಾವು ನಿನ್ನೆ ಮುಖ್ಯ ಕಾರ್ಯದರ್ಶಿ ಭೇಟಿ ಆಗಿದ್ದು, ರಾಜೀನಾಮೆ ಕೊಟ್ಟು ಎಲ್ಲರೂ ಹೋಗಲಿ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ

1750 ಟನ್ ಆಕ್ಸಿಜನ್ ರಾಜ್ಯಕ್ಕೆ ಬೇಕು ಅಂತ ಕೇಂದ್ರಕ್ಕೆ ರಾಜ್ಯ ಸರ್ಕಾರ ಡಿಮ್ಯಾಂಡ್ ಮಾಡಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ 850 ಟನ್ ಮಾತ್ರ ನೀಡಿದೆ. ಎಲ್ಲಾ ಆಕ್ಸಿಜನ್ ಕೇಂದ್ರ ಸರ್ಕಾರ ಟೇಕ್ ಓವರ್ ಮಾಡಿದೆ. ಇಲ್ಲಿ ಯಾರೋ ಜೈನ ಸಮುದಾಯದವರು ಎಮರ್ಜೆನ್ಸಿ ಅಂತ ತಂದಿದ್ದ ಆಕ್ಸಿಜನ್ ಕೂಡ ಡಿಸಿ ವಶಕ್ಕೆ ಪಡೆದಿದ್ರು. ಆಮೇಲೆ ನಾನೇ ರಿಕ್ವೆಸ್ಟ್ ಮಾಡಿ, ಮೊದಲು ಜೀವ ಉಳಿಯಲಿ ಅಂದಿದ್ದೆ. ಇವತ್ತು ಆಕ್ಸಿಜನ್ ಬೇಕು ಅಂತ ಅರ್ಡರ್ ಮಾಡಿದ್ರು. ಬರೋಕೆ ಇನ್ನೂ 15ರಿಂದ 30 ದಿನ ಬೇಕು. ಆರೋಗ್ಯ ಸಚಿವರ ರಾಜೀನಾಮೆ, ಇಷ್ಟು ಜನ ಸಚಿವರು ರಾಜೀನಾಮೆ, ಮುಖ್ಯ ಕಾರ್ಯದರ್ಶಿ ರಾಜೀನಾಮೆ ಅಷ್ಟೇ ಅಲ್ಲ, ಇಡೀ ಸರ್ಕಾರವೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಸಚಿವ ಸುರೇಶ್ ಕುಮಾರ್ ಬಹಳ ಬುದ್ಧಿವಂತ, ಬಹಳ ಡಿಪ್ಲೋಮ್ಯಾಟ್ ಇರಬಹುದು. ಆದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಹೋಗಿ ಕೇವಲ ಅರ್ಧ ಗಂಟೆ ಮಾತ್ರ ಇದ್ದು ಬರೋದಾ..? ಅಲ್ಲಿರುವ ರೋಗಿಗಳು, ಅವರ ಕುಟುಂಬದವರನ್ನ ಮಾತಾಡಿಸಬೇಕಲ್ವಾ..? ಮಾತಾಡಿಸಿದ್ದಾರಾ ಇವರು..? ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಿನ್ನೆ ಆರೇಳು ದೇಹಗಳ ಶವ ಸಂಸ್ಕಾರ ಪೊಲೀಸರೇ ಮಾಡಿದ್ದಾರೆ. ಉಳಿದದ್ದು ಊರಿಗೆ ಕಳಿಸಿದ್ದಾರೆ. ಜನರ ಆಕ್ರಂದನ ಮುಗಿಲು ಮುಟ್ಟಿದೆ. 24 ಈಗ ಕಾಣ್ತಿರೋ ನಂಬರ್. ರಾಜ್ಯದಲ್ಲಿ ಇನ್ನೂ ಹೆಚ್ಚಿಗೆ ಇದೆ. ಅದೆಲ್ಲಾ ತರಿಸುತ್ತಿದ್ದೇವೆ, ಈಗಲೇ ಹೇಳಿದರೆ ಜನ ಗಾಬರಿ ಆಗುತ್ತಾರೆ. ಗಾಬರಿಯಲ್ಲಿ ನನ್ನ ಸ್ನೇಹಿತರು ಒಬ್ಬರು ಸತ್ತಿದ್ದಾರೆ. ರಾಜರಾಜೇಶ್ವರಿ ಆಸ್ಪತ್ರೆಗೆ ಹಾಗೂ ಆರ್.ಟಿ.‌ ನಗರದ ಆಸ್ಪತ್ರೆಗೆ ನಿನ್ನೆ ರಾತ್ರಿ ಆಕ್ಸಿಜನ್ ಬಂದಿದೆ. ರಾಜಕೀಯ ಮುಖ್ಯ ಅಲ್ಲ, ಪ್ರತಿಯೊಬ್ಬರ ಜೀವ ಉಳಿಸೋದು ಮುಖ್ಯ. ಕುಟುಂಬಕ್ಕೆ ಧೈರ್ಯ ಕೊಡಬೇಕು, ಹಿಂದೆ ಎಲ್ಲಾ 60 ವರ್ಷ, 65 ವರ್ಷ ಅಂತಿದ್ರು. ಈಗ 20, 21, 22 ವರ್ಷದ ಯುವಕರು ಸಾವನ್ನಪ್ಪುತ್ತಿದ್ದಾರೆ ಎಂದರು.

ಇದನ್ನೂ ಓದಿ : ದುರಂತದ ಬಳಿಕ ಎಚ್ಚೆತ್ತ ಚಾಮರಾಜನಗರ ಜಿಲ್ಲಾಡಳಿತ: ಮೈಸೂರಿನಿಂದ 160 ಜಂಬೋ ಸಿಲಿಂಡರ್

ABOUT THE AUTHOR

...view details