ಕರ್ನಾಟಕ

karnataka

ETV Bharat / state

ನಿಮ್ಹಾನ್ಸ್​​​ಲ್ಲಿ ಅಡ್ಮಿಟ್ ಆಗಬೇಕಾದವರ ಬಗ್ಗೆ ನಾನು ಮಾತನಾಡಲ್ಲ: 'ರ-ಜಾ'ಗೆ ಡಿಕೆಶಿ ಟಾಂಗ್​ - ರಮೇಶ್​ ಜಾರಕಿಹೊಳಿಗೆ ಡಿಕೆಶಿ ಟಾಂಗ್

16 ಜನ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ..

ಜಾರಕಿಹೊಳಿಗೆ ಡಿಕೆಶಿ ಟಾಂಗ್​
ಜಾರಕಿಹೊಳಿಗೆ ಡಿಕೆಶಿ ಟಾಂಗ್​

By

Published : Jan 26, 2022, 3:27 PM IST

ಬೆಂಗಳೂರು : ನಿಮ್ಹಾನ್ಸ್​​ಲ್ಲಿ ಅಡ್ಮಿಟ್ ಆಗಬೇಕಾದವರ ಬಗ್ಗೆ ನಾನು ಮಾತನಾಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

16 ಜನ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಗ್ಗೆ ನಾನು ಹೆಚ್ಚಿನದನ್ನು ಹೇಳುವುದಿಲ್ಲ. ಲಿಸ್ಟ್ ಅವರ ಪಕ್ಷಕ್ಕೆ ಕೊಡಲಿ ಎಂದಷ್ಟೇ ಸಲಹೆ ನೀಡಿ ತೆರಳಿದರು.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟಾಂಗ್ ನೀಡಿರುವುದು..​

ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ ವಿಚಾರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ, ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು. ಅಧಿಕಾರಿಗಳ ಕೈಯಲ್ಲಿ ಅಧಿಕಾರ ಸಿಗಬಾರದು ಎಂದು ಪರೋಕ್ಷವಾಗಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಡಿಕೆಶಿ ಒತ್ತಾಯ ಮಾಡಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯ ಈ ಬಗ್ಗೆ ಹೇಳಿದ್ದಾರೆ. ಒಬ್ಬ ಸಚಿವರು ಸಿದ್ದರಾಮಯ್ಯ ಮಾತನಾಡಿರುವುದನ್ನ ಒಪ್ಪಿಕೊಂಡಿದ್ದಾರೆ. ನಮ್ಮ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇರುವುದು ನಿಜ ಎಂದರು.

ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ಹೈಪೈ ಲೈಫ್ ವಿಚಾರ ಮಾತನಾಡಿ, ಗೃಹ ಸಚಿವ ಆರಗ ಜ್ಞಾನೇಂದ್ರ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಸಮರ್ಥ, ಪ್ರಮಾಣಿಕ ವ್ಯಕ್ತಿ ಇದ್ದಾರೆ. ಮೊದಲ ದಿನವೇ ಕಾಂಗ್ರೆಸ್ ಅವರು ನನ್ನ ರೇಪ್ ಮಾಡುತ್ತಿದ್ದಾರೆ ಅಂತಾ ಹೇಳಿದ್ರು. ಅದರ ಬಳಿಕ ಬಹಳ ಹೇಳಿಕೆ ಕೊಟ್ಟಿದ್ದಾರೆ. ಈ ಸಮಸ್ಯೆಯನ್ನು ಅವರು ಬಗೆಹರಿಸುತ್ತಾರೆ ಎಂದರು.

ಸಿಎಂ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ, ಜನ ಈ ಸರ್ಕಾರದ ಬಗ್ಗೆ ನಿರಾಸೆಯಿಂದ ಇದ್ದಾರೆ. ನಮ್ಮ ನಡೆ 2023 ವಿಧಾನಸಭೆ ಚುನಾವಣೆ ಕಡೆ, ಜನ ಬದಲಾವಣೆ ಬಯಸುತ್ತಿದ್ದಾರೆ. 2023 ಕ್ಕೆ ಜನ ಬದಲಾವಣೆ ಬಯಸುವುದು ಗ್ಯಾರಂಟಿ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details