ಕರ್ನಾಟಕ

karnataka

By

Published : Jun 25, 2020, 5:43 PM IST

ETV Bharat / state

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶವನ್ನೇ ಕೊಂದು ಹಾಕುತ್ತಿವೆ: ಡಿಕೆಶಿ

ಕೊರೊನಾ ವಿಚಾರದಲ್ಲಿ ಪ್ರತಿ ಹಂತದಲ್ಲೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿಸುತ್ತಾ ಬಂದಿದೆ. ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.

KPCC President D.K. Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಣ ವಿಚಾರದಲ್ಲಿ ನಿರ್ಲಕ್ಷ ತಾಳಿವೆ. ದೇಶವನ್ನೇ ಕೊಂದು ಹಾಕುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ವಿಚಾರದಲ್ಲಿ ಪ್ರತಿ ಹಂತದಲ್ಲೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿಸುತ್ತಾ ಬಂದಿದೆ. ಪ್ರತಿ ಪಕ್ಷವಾಗಿ ನಾವು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದರೂ ಕೂಡ, ಸರ್ಕಾರ ನಿಯಂತ್ರಣ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ರೋಗಿಗಳಿಗೆ ಕನಿಷ್ಠ ಆ್ಯಂಬುಲೆನ್ಸ್ ಕಳಿಸಿ ಕೊಡುವ ಕಾರ್ಯವನ್ನು ಕೂಡ ಮಾಡದೇ ನಿರ್ಲಕ್ಷ್ಯ ತೋರಿ, ದೇಶವನ್ನೇ ಕೊಂದು ಬಿಟ್ಟಿದ್ದಾರೆ. ಜನ ಇದ್ದೂ ಸತ್ತಂತೆ. ಜನರನ್ನು ಆರ್ಥಿಕವಾಗಿ, ಸಾಮಾಜಿಕ, ಆರೋಗ್ಯಕರವಾಗಿ ಸಂಪೂರ್ಣವಾಗಿ ಕೊಂದು ಹಾಕಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಬಳಿ ಒಂದೆಡೆ ಹಣವಿಲ್ಲ, ಕೆಲವೊಂದು ಕಡೆ ಬಿಟ್ಟು ಇವತ್ತಿನವರೆಗೂ ಯಾರಿಗೂ ಹಣ ನೀಡುವಲ್ಲಿ ಸರ್ಕಾರ ಸಫಲವಾಗಿಲ್ಲ. ಇದರಿಂದಾಗಿ ತಾಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ, ವಾಹನ ಚಾಲಕರ ಸೆಲ್ ಸ್ಥಾಪಿಸಲು ನಿರ್ಧರಿಸಿದ್ದೇನೆ ಎಂದರು. ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ಮಾಡಲಿದ್ದೇವೆ. ಪ್ರತ್ಯೇಕ ಕೆಪಿಸಿಸಿ ಸೆಲ್​​ನ್ನು ಇದಕ್ಕಾಗಿ ಸ್ಥಾಪಿಸುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ

ಇದಲ್ಲದೆ ಶಿಕ್ಷಣದ ವಿಚಾರವಾಗಿಯೂ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೇವೆ. ಅದರ ವಿವರವನ್ನು ಮುಂದಿನ ಸಂದರ್ಭದಲ್ಲಿ ತಿಳಿಸುತ್ತೇನೆ. ಸರ್ಕಾರ ಮಕ್ಕಳ ಭವಿಷ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ. ಇದರಿಂದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ನಿವೇಶನದ ಮಾರಾಟದ ಮೇಲೆ ಜಿಎಸ್​​​ಟಿ ವಿಧಿಸಲು ಸರ್ಕಾರ ಮುಂದಾಗಿದೆ. ಬಡವ ಅನಿವಾರ್ಯಕ್ಕೆ ತನ್ನ ನಿವೇಶನ ಮಾರಿಕೊಳ್ಳಲು ಮುಂದಾದರೆ ಜಿಎಸ್​​ಟಿ ವಿಧಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಇದು ಆಗುತ್ತಿದೆ ಎಂದರು.

ಇಡೀ ರಾಜ್ಯವನ್ನು ಸುರಕ್ಷಿತವಾಗಿ ಇರಿಸುವುದು ಸರ್ಕಾರದ ಕರ್ತವ್ಯ. ಆದರೆ ಆ ಕಾರ್ಯ ಆಗುತ್ತಿಲ್ಲ. ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ನಾನು ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸಬೇಕಾಗಿದೆ ಎಂದರು.

ನನಗೆ ಇಡೀ ರಾಜ್ಯದ ಸಮಸ್ಯೆಯ ಗಮನವಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿ ಯೋಚಿಸುತ್ತಿಲ್ಲ. ಸರ್ಕಾರ ತನ್ನ ಕ್ರಮ ಕೈಗೊಳ್ಳಲಿ. ನಾನು ಆ ನಂತರ ಮಾತನಾಡುತ್ತೇನೆ. ಸರ್ಕಾರದ ಬಳಿ ದುಡ್ಡಿದ್ದರೆ ಅದನ್ನು ನೀಡಲಿ. ಅವರು ಏನು ಬೇಕಾದರೂ ಹೇಳಲಿ. ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details