ಬೆಂಗಳೂರು: ಕೊರೊನಾ ಮಹಾಮಾರಿ ವಿಶ್ವದಾದ್ಯಂತ ವ್ಯಾಪಿಸಿರುವ ಹಿನ್ನೆಲೆ ಸಾಗರೋತ್ತರ ಕನ್ನಡಿಗರು ಕೂಡ ಇದರಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದಾರೆ. ಈ ಸಮಯದಲ್ಲಿ ಸಾಗರೋತ್ತರ ಕನ್ನಡಿಗರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಅವುಗಳ ಪರಿಹಾರೋಪಾಯಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಗರೋತ್ತರ ಕನ್ನಡಿಗರ ಜೊತೆ ಸಂವಾದ ನಡೆಸಿದರು.
ತಮ್ಮ ಸದಾಶಿವನಗರ ನಿವಾಸದಿಂದ ಸಾಗರೋತ್ತರ ಕನ್ನಡಿಗರ ಜತೆ ಅವರು ಭಾನುವಾರ ವಿಡಿಯೋ ಸಂವಾದ ನಡೆಸಿದರು. ಝೂಮ್ ಆ್ಯಪ್ ಮೂಲಕ ವಿಶ್ವದ 40ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಜತೆ ಮಾತುಕತೆ ನಡೆಸಿದರು. ಈ ಸಂವಾದದಲ್ಲಿ ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ (ಯುಎಇ), ಅಮೆರಿಕದಿಂದ ಅಮರನಾಥ ಗೌಡ, ಸಂಘಟನಾ ಕಾರ್ಯದರ್ಶಿ ಹೇಮೇಗೌಡ ಮಧು (ಇಟಲಿ), ಉಪಾಧ್ಯಕ್ಷರಾದ ಗೋಪಾಲ ಕುಲಕರ್ಣಿ (ಯುಕೆ), ಜಂಟಿ ಕಾರ್ಯದರ್ಶಿ ರವಿ ಮಹದೇವ (ಸೌದಿ ಅರೇಬಿಯಾ), ಖಜಾಂಚಿ ಬಸವ ಪಾಟೀಲ್ (ಯುಕೆ) ಭಾಗವಹಿಸಿದ್ದರು.