ಕರ್ನಾಟಕ

karnataka

ETV Bharat / state

ಮೊದಲು ಆಪರೇಷನ್ ಕಮಲ ಮಾಡಿದ್ರು, ಈಗ ರೌಡಿಗಳ ಆಪರೇಷನ್ ಮಾಡುತ್ತಿದ್ದಾರೆ: ಡಿ ಕೆ ಶಿವಕುಮಾರ್ - ಚುನಾವಣೆ ಸಮಿತಿ ರಚನೆ

ಸೈಲೆಂಟ್ ಸುನೀಲ್ ಸೇರಿದಂತೆ ಇತರ ರೌಡಿಶೀಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ. ನಮ್ಮ ಪಾರ್ಟೀನೇ ಇಲ್ಲ, ಅವರದೇ ಪಾರ್ಟಿ ಇರೋದು ದೇಶದಲ್ಲಿ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ. ಏನೋ ಹೆಣ ಹೊರಲು ನಾಲ್ಕು ಜನ ಇದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​

By

Published : Dec 2, 2022, 4:04 PM IST

Updated : Dec 2, 2022, 4:41 PM IST

ಬೆಂಗಳೂರು: ಮೊದಲು ಆಪರೇಷನ್ ಕಮಲ ಮಾಡಿದ್ರು. ಈಗ ರೌಡಿಗಳ ಆಪರೇಷನ್ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಬಿಜೆಪಿ ಪಕ್ಷಕ್ಕೆ ಟಾಂಗ್ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸೈಲೆಂಟ್ ಸುನೀಲ್ ಸೇರಿದಂತೆ ಇತರ ರೌಡಿಶೀಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ. ನಮ್ಮ ಪಾರ್ಟೀನೇ ಇಲ್ಲ, ಅವರದೇ ಪಾರ್ಟಿ ಇರೋದು ದೇಶದಲ್ಲಿ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ. ಏನೋ ಹೆಣ ಹೊರಲು ನಾಲ್ಕು ಜನ ಇದ್ದೇವೆ ಎಂದು ಲೇವಡಿ ಮಾಡಿದರು.

ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೂರ್ನಾಲ್ಕು ದಿನಗಳಲ್ಲಿ ಚುನಾವಣೆ ಸಮಿತಿ ರಚನೆ ಆಗುತ್ತದೆ. ದೆಹಲಿಯಿಂದ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು.

ಓದಿ:ಗಡಿ ವಿವಾದದಲ್ಲಿ ಸರ್ಕಾರ ರಾತ್ರಿ ರಾಜಕಾರಣ ಮಾಡೋದು ಬಿಡಲಿ: ಡಿ ಕೆ ಶಿವಕುಮಾರ್​

Last Updated : Dec 2, 2022, 4:41 PM IST

ABOUT THE AUTHOR

...view details