ಬೆಂಗಳೂರು: ಕಾಂಗ್ರೆಸ್ ಪಕ್ಷದ ವತಿಯಿಂದ ಬಡವರು ಹಾಗೂ ಹಸಿದವರಿಗೆ ಆಹಾರ ವಿತರಿಸಲು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಕಸಂಧ್ರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿನ ಆಹಾರ ತಯಾರಿಕಾ ಕೇಂದ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಉಚಿತ ಆಹಾರ ಪೂರೈಕೆ.. ಗುಣಮಟ್ಟ ಪರೀಕ್ಷಿಸಿದ ರಾಮಲಿಂಗಾ ರೆಡ್ಡಿ - ಡಿಕೆಶಿ - ಕೊರೊನಾ ಮುನ್ನೆಚ್ಚರಿಕೆ
ಕೊರೊನಾ ಸೋಂಕು ತಡೆ ಜಾಗೃತಿ ಮೂಡಿಸುವ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಆಹಾರದ ಕೊರತೆ ಎದುರಿಸುತ್ತಿರುವ ವರ್ಗದವರಿಗೆ ಉಚಿತವಾಗಿ ಆಹಾರ ಪೂರೈಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಕಳೆದ ಒಂದು ವಾರದಿಂದ ಮಾಡಿಕೊಂಡು ಬಂದಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ರಾಮಲಿಂಗಾ ರೆಡ್ಡಿ ಅವರು ಜತೆಗಿದ್ದರು. ಡಿಕೆ ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಆಹಾರ ಸವಿದು ಗುಣಮಟ್ಟ ಪರೀಕ್ಷಿಸಿದರು. ಕೊರೊನಾ ಸೋಂಕು ತಡೆ ಜಾಗೃತಿ ಮೂಡಿಸುವ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಆಹಾರದ ಕೊರತೆ ಎದುರಿಸುತ್ತಿರುವ ವರ್ಗದವರಿಗೆ ಉಚಿತವಾಗಿ ಆಹಾರ ಪೂರೈಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಕಳೆದ ಒಂದು ವಾರದಿಂದ ಮಾಡಿಕೊಂಡು ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದು, ನಗರದ ಎಲ್ಲೆಡೆ ಸಂಚರಿಸಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಇದರ ಭಾಗವಾಗಿಯೇ ಇಂದು ಲಕ್ಕಸಂದ್ರ ಚೌಡೇಶ್ವರಿ ಕಲ್ಯಾಣ ಮಂಟಪಕ್ಕೆ ಭೇಟಿಕೊಟ್ಟಿದ್ದರು.