ಕರ್ನಾಟಕ

karnataka

By

Published : Jan 22, 2021, 8:19 PM IST

ETV Bharat / state

ಬಿಜೆಪಿ ಜೊತೆ ಕೈಜೋಡಿಸುವ ವಿಚಾರವಾಗಿ ವಿರೋಧ ಅಷ್ಟೇ, ಗಲಾಟೆ ನಡೆದಿಲ್ಲ: ಸಲೀಂ ಅಹ್ಮದ್‌

ಸಭೆಯಲ್ಲಿ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಸುವ ವಿಚಾರಕ್ಕೆ ಚರ್ಚೆ ನಡೆದಿದೆ. ಈ ವೇಳೆ ಜೋರಾಗಿ ಮಾತುಕತೆ ನಡೆದಿದೆ. ಬಿಜೆಪಿಯ ಕೆಲ ಸದಸ್ಯರನ್ನು ಸೇರಿಸುವ ವಿಚಾರಕ್ಕೆ ಚರ್ಚೆ ನಡೆದಿದೆ ಅಷ್ಟೇ ಬಿಟ್ಟರೆ, ನಮ್ಮ ಕಚೇರಿಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

kpcc-office-uproar-congress-clarification-news
ಕಾಂಗ್ರೆಸ್ ಸ್ಪಷ್ಟಣೆ

ಬೆಂಗಳೂರು:ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟೀಕರಣ ನೀಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ರಾಜಭವನ ಚಾಲೋ ಕಾರ್ಯಕ್ರಮದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ಈ ವೇಳೆ ಕೆಪಿಸಿಸಿ ವತಿಯಿಂದ ಧನ್ಯವಾದ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಸುವ ವಿಚಾರಕ್ಕೆ ಚರ್ಚೆ ನಡೆದಿದೆ. ಈ ವೇಳೆ ಜೋರಾಗಿ ಮಾತುಕತೆ ನಡೆದಿದೆ. ಬಿಜೆಪಿಯ ಕೆಲ ಸದಸ್ಯರನ್ನು ಸೇರಿಸುವ ವಿಚಾರಕ್ಕೆ ಚರ್ಚೆ ನಡೆದಿದ್ದು ಬಿಟ್ಟರೆ ನಮ್ಮ ಕಚೇರಿಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದರು.

ಕೆಪಿಸಿಸಿ ಕಚೇರಿ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್​ ನಾಯಕರು

ಬಿದರಳ್ಳಿ ಗ್ರಾ.ಪಂ ಚುನಾವಣೆ ಚರ್ಚೆ ‌ನಡೀತಿತ್ತು. ಮನೋಹರ ಕಡೆಯವರು ಆ ಪಂಚಾಯತಿಯಲ್ಲಿ ಗೆದ್ದಿದ್ದಾರೆ. ಹೀಗಾಗಿ ‌ಮನೋಹರ್ ಬಂದಿದ್ರು. ಕೇವಲ ಮಾತು ಬೆಳೆದಿದೆ ಅಷ್ಟೇ. ಗಲಾಟೆಯಾಗಿಲ್ಲ ಎಂದು ಘಟನೆ ಬಗ್ಗೆ ಸಲೀಂ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

ಯುವ ಕಾಂಗ್ರೆಸ್ ನಾಯಕ ಮನೋಹರ್ ಮಾತನಾಡಿ, ನಾರಾಯಣ ಸ್ವಾಮಿ ಮೇಲೆ ಹಲ್ಲೆ ಮಾಡಲು ನನಗೂ ಅವರಿಗೂ ಏನು ಸಂಬಂಧ?. ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ನನಗೂ ಅವರಿಗೂ ಯಾವುದೇ ರೀತಿಯ ಸಂಘರ್ಷ ಇಲ್ಲ. ಯಾವ ದೇವರ ಮೇಲೆ ಬೇಕಾದ್ರೂ ಆಣೆ ಮಾಡ್ತೀವಿ ಎಂದರು.

ABOUT THE AUTHOR

...view details