ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆ ಹಿನ್ನೆಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನೀರವ ಮೌನ ಆವರಿಸಿದೆ.
ಫಲಿತಾಂಶ ಎಫೆಕ್ಟ್: ಬಿಕೋ ಎನ್ನುತ್ತಿದೆ ಕೆಪಿಸಿಸಿ ಕಚೇರಿ - undefined
ಲೋಕಸಭಾ ಫಲಿತಾಂಶದ ಟ್ರೆಂಡಿಂಗ್ನಲ್ಲಿ ಕೈ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಿಕೋ ಎನ್ನುತ್ತಿದೆ.
ಕೆಪಿಸಿಸಿ ಕಚೇರಿಯಲ್ಲಿ ನೀರವ ಮೌನ!!
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಕಾರ್ಯಕರ್ತರಿಲ್ಲದೆ ಬಣಗುಡುತ್ತಿದೆ. ಬೆಳಗ್ಗಿನಿಂದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಇದುವರೆಗೂ ಯಾವುದೇ ಕೈ ಮುಖಂಡರು ಸಹ ಭೇಟಿ ನೀಡಿಲ್ಲ. ಇನ್ನೂ ಫಲಿತಾಂಶ ವೀಕ್ಷಸಲು ಇಲ್ಲಿ ಎಲ್ಇಡಿ ಸ್ಕ್ರೀನ್ ಕೂಡ ಅಳವಡಿಸಿಲ್ಲ. ಹೀಗಾಗಿ, ಕೆಪಿಸಿಸಿ ಕಚೇರಿ ಬಿಕೋ ಎನ್ನುತ್ತಿದೆ.