ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ನಡುವೆ ದೊಡ್ಡ ಮಟ್ಟದ ವಾಕ್ಸಮರ, ಗದ್ದಲ ನಡೆದಿದೆ.
ಕೆಪಿಸಿಸಿ ಕಚೇರಿಯಲ್ಲಿ ನಾರಾಯಣಸ್ವಾಮಿ-ಮನೋಹರ್ ನಡುವೆ ಗಲಾಟೆ - ರಾಜಭವನ ಚಲೋ ಕಾರ್ಯಕ್ರಮ
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಸಮ್ಮುಖದಲ್ಲಿ ನಡೆದ ಗಲಾಟೆಯನ್ನು ಕೊನೆಗೂ ನಿಯಂತ್ರಣ ಮಾಡಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಮಾರಾಮಾರಿ
ರಾಜಭವನ ಚಲೋ ಕಾರ್ಯಕ್ರಮದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದು, ಎಲ್ಲರಿಗೂ ಕೆಪಿಸಿಸಿ ವತಿಯಿಂದ ಧನ್ಯವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ಮನೋಹರ್ ನಡುವೆ ಗದ್ದಲ ನಡೆದಿದೆ. ಉಭಯ ನಾಯಕರು ನಡೆಸುತ್ತಿದ್ದ ಗದ್ದಲ ನೋಡಿ, ಮಾಧ್ಯಮದವರು ಬರುತ್ತಿದ್ದಂತೆ ಬಾಗಿಲು ಬಂದ್ ಮಾಡಿಕೊಂಡು ಕೈ ಮುಖಂಡರು ಸಭೆ ನಡೆಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ದ್ರುವ ನಾರಾಯಣ್ ಸಮ್ಮುಖದಲ್ಲಿ ನಡೆದ ಗಲಾಟೆಯನ್ನು ಕೊನೆಗೆ ನಿಯಂತ್ರಣ ಮಾಡಲಾಗಿದೆ ಎನ್ನಲಾಗಿದೆ.