ಕರ್ನಾಟಕ

karnataka

ETV Bharat / state

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಲ್ವರು ಕಾರ್ಪೋರೇಟರ್ ಉಚ್ಛಾಟಿಸಿದ ಕಾಂಗ್ರೆಸ್​ - ಬಿಬಿಎಂಪಿ‌ ಕಾರ್ಪೋರೇಟರ್ಸ್ ಉಚ್ಚಾಟನೆ ಸುದ್ದಿ ಬೆಂಗಳೂರು

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್​ಗಳನ್ನು ಕೆಪಿಸಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.

ಕಾಂಗ್ರೆಸ್

By

Published : Nov 20, 2019, 9:48 PM IST

ಬೆಂಗಳೂರು:ಪಕ್ಷ ವಿರೋಧಿ ಚಟುವಟಿಕೆ‌ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್​ಗಳನ್ನು ಕೆಪಿಸಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.

ಕಾಂಗ್ರೆಸ್ ಕಾರ್ಪೋರೇಟರ್​ಗಳ ಉಚ್ಚಾಟನೆ.
ಕಾಂಗ್ರೆಸ್ ಕೆ.ಆರ್.ಪುರ ಬ್ಲಾಕ್​ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶ ರದ್ದು.

ಬಸವಪುರ ವಾರ್ಡ್ ಕಾರ್ಪೋರೇಟರ್ ಜಯಪ್ರಕಾಶ್, ದೇವಸಂದ್ರ ವಾರ್ಡ್​ನ‌ ಶ್ರೀಕಾಂತ್, ವಿಜ್ಞಾನ ನಗರದ ನಾಗರಾಜ್ ಹಾಗೂ ನಾರಾಯಣಪುರ ವಾರ್ಡ್​ನ ಸುರೇಶ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದ್ಯಸತ್ವದಿಂದ ಆರು ವರ್ಷಗಳ‌‌ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ‌‌ ಕಾರ್ಯದರ್ಶಿ ಹಾಜಿ ಷಫಿ ಉಲ್ಲಾ ಆದೇಶಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಕೆ.ಆರ್.ಪುರ ಬ್ಲಾಕ್​ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶವನ್ನು ರದ್ದುಗೊಳಿಸಲಾಗಿದೆ.

For All Latest Updates

TAGGED:

ABOUT THE AUTHOR

...view details