ಕರ್ನಾಟಕ

karnataka

ETV Bharat / state

ಕೆಪಿಸಿಸಿಗೆ ಕಾರ್ಯಾಧ್ಯಕ್ಷರ ನೇಮಕ- ಇಂದು ಅಥವಾ ನಾಳೆ ಘೋಷಣೆ: ಮಾಜಿ ಗೃಹ ಸಚಿವ - ಕೆಪಿಸಿಸಿ ನೇಮಕ

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಬಹುತೇಕ ಇವತ್ತು ಅಥವಾ ನಾಳೆ ಅಧಿಕೃತವಾಗಿ ಗೊತ್ತಾಗುತ್ತೆ. ಪಕ್ಷ ಏನ್ ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನ ಪಾಲಿಸ್ಬೇಕಾಗುತ್ತೆ ಎಂದರು.

MBP
ಮಾಜಿ ಸಚಿವ ಎಂ.ಬಿ. ಪಾಟೀಲ್

By

Published : Jan 17, 2020, 1:24 PM IST

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಬಹುತೇಕ ಇವತ್ತು ಅಥವಾ ನಾಳೆ ಅಧಿಕೃತವಾಗಿ ಗೊತ್ತಾಗುತ್ತೆ. ಪಕ್ಷ ಏನ್ ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನ ಪಾಲಿಸ್ಬೇಕಾಗುತ್ತೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿ, ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದರಲ್ಲಿ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಅಧ್ಯಕ್ಷರೊಬ್ಬರೇ ಎಲ್ಲ ಕಡೆಯೂ ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಕಾರ್ಯಾಧ್ಯಕ್ಷ ನೇಮಕ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬಹುದು.

ಮಾಜಿ ಸಚಿವ ಎಂ.ಬಿ. ಪಾಟೀಲ್

ವೈಯಕ್ತಿಕ ಅಭಿಪ್ರಾಯಗಳು ಬಹಳ ಇವೆ. ಪಕ್ಷದವರೇ ಎಲ್ಲ ತೀರ್ಮಾನ ಮಾಡ್ತಾರೆ. ಎಲ್ಲದಕ್ಕೂ ಕಾದು ನೋಡೋಣ. ಮುಂಚೆಯೇ ಹೇಳಲು ಆಗಲ್ಲ. ನನ್ನನ್ನು ಅಧ್ಯಕ್ಷ ಮಾಡ್ಬೇಕು ಅಂತ ನಾನ್ಯಾರನ್ನು ಭೇಟಿ ಮಾಡಿಲ್ಲ. ಮನವಿ ಮಾಡಿಲ್ಲ. ಆದ್ರೆ ಯಾರು ಸೂಕ್ತ ಅನ್ನೋ ಪಟ್ಟಿಯಲ್ಲಿ ನನ್ನ ಹೆಸರೂ ಸೂಚಿಸಿದ್ದಾರೆ ಎಂದು ವಿವರಿಸಿದ್ದಾರೆ.

ನಾನು ಲಾಭಿಯೇ ಮಾಡಿಲ್ಲ. ಲಿಂಗಾಯತ ಸಮುದಾಯ, ಉತ್ತರ ಕರ್ನಾಟಕಕ್ಕೆ ಕೊಟ್ರೆ ಉತ್ತಮ ಅನ್ನೋ ಚರ್ಚೆಯಿಂದಾಗಿ ನನ್ನ ಹೆಸರೂ ಕೇಳಿ ಬಂದಿದೆ. ಆದರೆ ನಾನು ಯಾರಿಗೂ ಲಾಭಿಮಾಡಿಲ್ಲ ಎಂದರು. ಸರ್ಕಾರದ ಸಂಪುಟ ವಿಸ್ತರಣೆ ವಿಳಂಬ ವಿಚಾರ ಮಾತನಾಡಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಅಂದು ನಮ್ಮ ಪಕ್ಷದ ಶಾಸಕರನ್ನ ಕರ್ಕೊಂಡ್ ಹೋಗಿ ಮಂತ್ರಿ ಮಾಡೋ ಆಮಿಷ ಒಡ್ಡಿದ್ರು. ಈಗ ಮಾತಿನಂತೇ ನಡ್ಕೊಳ್ಬೇಕಲ್ಲಾ. ಅವರದ್ದೇ ಸರ್ಕಾರ ಇದೆ. ಜನರೂ ಸಹ ಶಾಸಕರು ಮಂತ್ರಿ ಆಗ್ತಾರೆ ಅಂತ ಮತ ಹಾಕಿದ್ದಾರೆ ಎಂದು ಹೇಳಿದರು.

ಸ್ವಾಮೀಜಿ ಮಾತನಾಡಿದ್ದು ತಪ್ಪು, ತಮ್ಮ ಸಮುದಾಯಕ್ಕೆ ಬೆಂಬಲ ಕೊಡ್ಬೇಕು ಅಂತ ಕೇಳೋದು ತಪ್ಪಲ್ಲ. ಆದ್ರೆ ಕೊಡದಿದ್ರೆ ಕ್ರಮ ತೆಗೆದ್ಕೊಳ್ತೇವೆ ಅನ್ನೋದು ಸರಿ ಅಲ್ಲ. ಅವ್ರು ಕೇಳೋ ರೀತಿ ನೋಡಿದ್ರೆ ಎಲ್ಲೋ ಸಮಸ್ಯೆ ಆಗಿದೆ ಎಂದರು.

ABOUT THE AUTHOR

...view details