ಕರ್ನಾಟಕ

karnataka

ETV Bharat / state

ಕೋವಿಡ್ ಟೆಸ್ಟ್ ವರದಿ ಇನ್ಮುಂದೆ ಬಿಬಿಎಂಪಿ ವೆಬ್​ಸೈಟ್​ನಲ್ಲೇ ಲಭ್ಯ: ಬಿಬಿಎಂಪಿ ಆಯುಕ್ತ - BBMP Commissioner Manjunath Prasad

ಬಿಬಿಎಂಪಿ ವೆಬ್​ಸೈಟ್​ನಲ್ಲಿ ಹೊಸ ಎಲಿಮೆಂಟ್ ಅಳವಡಿಸಲಾಗುತ್ತಿದೆ. ಯಾರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಾರೋ ಅವರು 24 ಗಂಟೆಗಳ ಬಳಿಕ ಮನೆಯಲ್ಲೇ ಮೊಬೈಲ್ ನಂಬರ್ ಹಾಗೂ ಎಸ್​ಆರ್​ಎಫ್​ ಐಡಿ ನಮೂದಿಸುವ ಮೂಲಕ ವೆಬ್​ಸೈಟ್​ನಲ್ಲೇ ಪಾಸಿಟಿವ್ ಅಥವಾ ನೆಗೆಟಿವ್ ಇದೆಯೇ ಎಂದು ಗೊತ್ತಾಗಲಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

By

Published : Mar 18, 2021, 8:33 PM IST

ಬೆಂಗಳೂರು:ಕೋವಿಡ್ ಟೆಸ್ಟ್ ಮಾಡಿದ ಬಳಿಕ ಇನ್ನು ರಿಸಲ್ಟ್​ಗಾಗಿ ಕಾಯುವ ಅಗತ್ಯ ಇಲ್ಲ. ಈ ವಿಧಾನವನ್ನು ಸುಲಭಗೊಳಿಸಿರುವ ಬಿಬಿಎಂಪಿ, ತನ್ನ ವೆಬ್​​​ಸೈಟ್​ನಲ್ಲೇ ವರದಿ ತಿಳಿಸುಯುವ ವ್ಯವಸ್ಥೆ ಮಾಡಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ವೆಬ್​ಸೈಟ್​ನಲ್ಲಿ ಹೊಸ ಎಲಿಮೆಂಟ್ ಅಳವಡಿಸಲಾಗುತ್ತಿದೆ. ಯಾರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಾರೋ ಅವರು 24 ಗಂಟೆಗಳ ಬಳಿಕ ಮನೆಯಲ್ಲೇ ಮೊಬೈಲ್ ನಂಬರ್ ಹಾಗೂ ಎಸ್​ಆರ್​ಎಫ್​ ಐಡಿ ನಮೂದಿಸುವ ಮೂಲಕ ವೆಬ್​ಸೈಟ್​ನಲ್ಲೇ ಪಾಸಿಟಿವ್ ಅಥವಾ ನೆಗೆಟಿವ್ ಇದೆಯೇ ಎಂದು ಗೊತ್ತಾಗಲಿದೆ. ಬೇರೆ ಲ್ಯಾಬ್ ಅಥವಾ ಬೇರೆ ಕಡೆ ಹೋಗಿ ಪರಿಶೀಲಿಸುವ ಕಷ್ಟ ಪಡಬೇಕಿಲ್ಲ ಎಂದರು.

ಓದಿ:ಎಲೆಯಂತೆಯೇ ಇರುವ ಕೀಟ: ವಿಡಿಯೋ ವೈರಲ್

ಕೋವಿಡ್ ಟೆಸ್ಟ್ ಬಳಿಕ ನೇರವಾಗಿ ಮುಖ್ಯ ಕಚೇರಿಯಿಂದ ಆಯಾ ವಾರ್ಡ್​ನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನೆ ಆಗಲಿದೆ. ಈ ಮೊದಲು ಪಾಲಿಕೆ ಕೇಂದ್ರ ಕಚೇರಿಯಿಂದ ವಲಯವಾರು ಕೋವಿಡ್ ಸೆಂಟರ್‌ಗಳಿಗೆ ಮಾಹಿತಿ ತಲುಪುವುದು ತಡವಾಗ್ತಿತ್ತು. ಹೀಗಾಗಿ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವುದರಿಂದ ತಕ್ಷಣ ರೋಗಿಯನ್ನು ಕ್ವಾರಂಟೈನ್ ಮಾಡಲು ಹಾಗೂ ಸಂಪರ್ಕ ಪತ್ತೆ ಹಚ್ಚಲು ನೆರವಾಗಲಿದೆ ಎಂದರು.

ABOUT THE AUTHOR

...view details