ಕರ್ನಾಟಕ

karnataka

ETV Bharat / state

ಈ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಇದು ಬಿಬಿಎಂಪಿ ಆದೇಶ - kovid mask compulsory news

ಮಾಸ್ಕ್ ಧರಿಸುವ ಬಗ್ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿವರ ನೀಡಿದೆ. ಮುಖ್ಯವಾಗಿ ಮಕ್ಕಳಿಗೂ ಫೇಸ್ ಮಾಸ್ಕ್ ಕಡ್ಡಾಯವೇ, ಇಲ್ಲವೇ? ಯಾವ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬಹುದು?, ಧರಿಸಬಾರದು ಎನ್ನುವ ಸಂಬಂಧ ಆದೇಶ ಹೊರಡಿಸಿದೆ.

5 years old
ಈ ವಯಸ್ಸಿನ ಮಕ್ಕಳು ಮಾಸ್ಕ್ ಹಾಕುವುದು ಕಡ್ಡಾಯವಲ್ಲ.

By

Published : Oct 28, 2020, 11:06 AM IST

ಬೆಂಗಳೂರು:ಕೊರೊನಾ ವೈರಸ್ ನಿಯಂತ್ರಿಸಲು ಮಾಸ್ಕ್ ಧರಿಸುವ ಸಂಬಂಧ ಬಹಳಷ್ಟು ಗೊಂದಲವಿದ್ದ ಕಾರಣ ಇದೀಗ ಬಿಬಿಎಂಪಿ ಮಾಸ್ಕ್ ಧರಿಸುವ ಕುರಿತಂತೆ ಸ್ಪಷ್ಟನೆ ನೀಡಿದೆ. ಮುಖ್ಯವಾಗಿ ಮಕ್ಕಳಿಗೂ ಫೇಸ್ ಮಾಸ್ಕ್ ಕಡ್ಡಾಯವೇ? ಯಾವ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬಹುದು? ಧರಿಸಬಾರದು ಎನ್ನುವ ಸಂಬಂಧ ಆದೇಶದಲ್ಲಿ ವಿವರವಿದೆ.

5 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯ ಜೊತೆಗೆ ಸಮರ್ಪಕವಾಗಿ ಮಾಸ್ಕ್ ಧರಿಸಲು ಸ್ವಂತಿಕೆ ಅಗತ್ಯ ಇರುವುದರಿಂದ ಮಕ್ಕಳಿಗೆ ಮಾಸ್ಕ್ ಹಾಕಿದ್ದರೆ ಕಿತ್ತುಕೊಳ್ಳುವುದರಿಂದ ಅವರು ಮಾಸ್ಕ್ ಹಾಕುವ ಅಗತ್ಯವಿಲ್ಲ. ಹಾಗೆಯೇ ಶ್ರವಣದೋಷ ಸಾಧನ ಅಳವಡಿಕೆಗೆ ತೊಂದರೆ ಆದರೆ ಅಂತಹವರು ಮಾಸ್ಕ್ ಹಾಕಬೇಕಿಲ್ಲ. ತೀವ್ರ‌ ಉಸಿರಾಟದ ತೊಂದರೆ, ಹಲ್ಲಿನ ತೊಂದರೆ ಇದ್ದರೆ ಮಾಸ್ಕ್ ಬೇಕಿಲ್ಲ ಆದರೆ ಇದಕ್ಕೆಲ್ಲ ವೈದ್ಯರ ಸಲಹಾ ಚೀಟಿ‌ ಇರಲೇಬೇಕು.

ಒಂಟಿ ಪಯಣಕ್ಕೂ‌ ಬೇಕು ಫೇಸ್ ಮಾಸ್ಕ್

ಇನ್ನು‌ ಕಾರು, ಬೈಕ್ ಚಲಾಯಿಸುವಾಗ ಒಂಟಿಯಾಗಿದ್ದೇವೆ. ಜೊತೆಗೆ ಯಾರೂ ಇಲ್ಲ, ಫೇಸ್ ಮಾಸ್ಕ್ ಯಾಕ್ರಿ ಹಾಕೋಣಾ? ಅಂತ ಜನರು ಬಿಬಿಎಂಪಿ ಮಾರ್ಷಲ್‌ಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸ್ತಿದ್ರು. ಇದೀಗ ಅದಕ್ಕೂ ಸ್ಪಷ್ಟಪಡಿಸಿರುವ ಪಾಲಿಕೆ, ಒಬ್ಬರೇ ಆದ್ರೂ ಕಾರು ಆಗಲಿ ಬೈಕ್ ಆಗಲಿ ಮಾಸ್ಕ್ ಹಾಕೋದು ಮಾತ್ರ ಕಡ್ಡಾಯ. ಸಹ ಪ್ರಯಾಣಿಕರೇ ಇರಲಿ ಅಥವಾ ಒಂಟಿ ಸಂಚಾರಿಯಾದರೂ ಮಾಸ್ಕ್ ಧರಿಸದೇ ಹೊರಗೆ ಬರೋ ಆಗಿಲ್ಲ. ಒಂದು ವೇಳೆ ಬಂದರೆ 250 ರೂ ದಂಡ ಕಟ್ಟಲೇಬೇಕು.

ಮನೆಯಲ್ಲಿ ಇರುವಾಗ- ಕಚೇರಿಯಲ್ಲಿರುವಾಗಲೂ ಯಾರೆಲ್ಲ ಮಾಸ್ಕ್ ಹಾಕಬೇಕು ಗೊತ್ತಾ?

ಹೊರಗಿನ ಮಾಸ್ಕ್ ಸ್ಟೋರಿ ಹೀಗಿದ್ದರೆ ಮನೆ- ಕಚೇರಿಯ ಒಳಗೂ ಮಾಸ್ಕ್ ಧರಿಸಲು ರೂಲ್ಸ್ ಇದೆ. ಮನೆಯಲ್ಲಿ ಆರೋಗ್ಯವಂತರು ಇದ್ದರೆ ಅವ್ರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ ಮನೆಯಲ್ಲಿ ಸೋಂಕಿತರಿದ್ದಾಗ, ಹೋಂ ಕ್ವಾರೆಂಟೈನ್‌ನಲ್ಲಿ ಇದ್ದರೆ ಅವರು ಮಾಮೂಲಿ ಫೇಸ್ ಮಾಸ್ಕ್ ಧರಿಸಬಹುದು. ಮನೆಯಲ್ಲೇ ಪ್ರತ್ಯೇಕವಾಸ, ಚಿಕಿತ್ಸೆ ಪಡೆಯುತ್ತಿದ್ದರೆ ಮೂರು ಪದರಗಳ ವೈದ್ಯಕೀಯ ಮಾಸ್ಕ್ (three layer mask) ಕಡ್ಡಾಯ.

ಕಚೇರಿ/ ಕೆಲಸದ ಸ್ಥಳಗಳಲ್ಲಿ, ಪೂಜಾ ಸ್ಥಳ, ಮದುವೆ ಸಮಾರಂಭ, ಕಾರ್ಯಕ್ರಮ, ಅಂತ್ಯಸಂಸ್ಕಾರದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ. ಜನ ಜಂಗುಳಿ, ಸಾರ್ವಜನಿಕ ಸಾರಿಗೆ, ರೆಸ್ಟೋರೆಂಟ್, ಬಾರ್ ಸೇರಿದಂತೆ ಜನ ಸೇರುವ ಜಾಗದಲ್ಲಿ ಮಾಸ್ಕ್ ಹಾಕದೇ ಇರುವ ಹಾಗಿಲ್ಲ.

ABOUT THE AUTHOR

...view details